ಜಿಲ್ಲೆ

ಸರಾಗವಾಗಿ ನಡೆದ ಮತ ಎಣಿಕೆ

ಬಾದಾಮಿ: ಪಟ್ಟಣದ ವೀರಪುಲಿಕೇಶಿ ಸಂಸ್ಥೆಯಲ್ಲಿ ಬುಧವಾರ ಗ್ರಾಪಂ ಚುನಾವಣೆ ಮತ ಎಣಿಕೆ ನಡೆಯಿತು.

ತಾಲೂಕಿನ 30 ಗ್ರಾಪಂಗಳ 483 ಸ್ಥಾನಗಳಲ್ಲಿ 51 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಇದರಲ್ಲಿ 7 ಸ್ಥಾನಗಳಿಗೆ ಕುಟುಕನಕೇರಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಉಳಿದಂತೆ 425 ಸ್ಥಾನಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಸರಾಗವಾಗಿ ನಡೆಯಿತು. ಲಿತಾಂಶವನ್ನು ಆಗಾಗ ಧ್ವನಿವರ್ಧಕದ ಮೂಲಕ ಪ್ರಕಟಿಸುತ್ತಿದ್ದರು. ಆಯ್ಕೆಯಾದ ಅಭ್ಯರ್ಥಿಗಳ ಬೆಂಬಲಿಗರು ಗುಲಾಲು ಹಾಕಿ ವಿಜಯೋತ್ಸವ ಆಚರಿಸಿದರು.

ಎಣಿಕೆ ಕೇಂದ್ರದಲ್ಲಿ ತಾಲೂಕು ಚುನಾವಣಾಧಿಕಾರಿ ಸುಹಾಸ ಇಂಗಳೆ, ತಾಪಂ ಇಒ ಡಾ. ಪುನೀತ್, ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ಪ್ರಕಾಶ ಬಣಕಾರ, ಚುನಾವಣೆ ಎಣಿಕೆ ಸಿಬ್ಬಂದಿ ಹಾಜರಿದ್ದರು.

ಚೀಟಿ ಎತ್ತುವ ಮೂಲಕ ಆಯ್ಕೆ
ತಾಲೂಕಿನ ಕೈನಕಟ್ಟಿ ಗ್ರಾಪಂ ವ್ಯಾಪ್ತಿಯ ಜಂಗವಾಡ ಗ್ರಾಮದ ಮಂಜುಳಾ ಬಸವರಾಜ ಜಂಬಗಿ ಮತ್ತು ರಸುಲ್ಲಾಬಿ ಮುಲ್ಲಾ ಇಬ್ಬರು ಸಮನಾಗಿ 230 ಮತಗಳನ್ನು ಪಡೆದರು. ಇಬ್ಬರು ಚೀಟಿ ಎತ್ತುವ ಮೂಲಕ ವಿಜಯಶಾಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಯಿತು. ಚೀಟಿಯಲ್ಲಿ ರಸುಲ್ಲಾಬಿ ಮುಲ್ಲಾ ವಿಜಯಶಾಲಿಯಾದರು.

ಒಂದು ಮತದ ಗೆಲುವು
ತಾಲೂಕಿನ ಚೊಳಚಗುಡ್ಡ ಗ್ರಾಮದ ವಾರ್ಡ ನಂ.2 ರಲ್ಲಿ ವಿರೇಶ ಶಿವಶಂಕರಪ್ಪ ಅಂಗಡಿ (165), ಸುನೀಲ್ ಮೋಹನ ಮೊಹಿತೆ(164) ಮತಗಳನ್ನು ಪಡೆಯುವ ಮೂಲಕ ವಿರೇಶ ಅಂಗಡಿ ಕೇವಲ ಒಂದು ಮತದಿಂದ ವಿಜಯಶಾಲಿಯಾದರು.

ಜನವೋ ಜನ
ಗ್ರಾ.ಪಂ. ಚುನಾವಣೆ ಲಿತಾಂಶದ ಕಾರಣ ಎಣಿಕೆ ಕೇಂದ್ರ ವೀರಪುಲಿಕೇಶಿ ಸಂಸ್ಥೆಯ ಆವರಣದಲ್ಲಿ, ಬಯಲು ಜಾಗೆಯಲ್ಲಿ, ನ್ಯಾಯಾಲಯದ ಎದುರು, ಮಯೂರ ಚಾಲುಕ್ಯ ಹೋಟೆಲ್ ಹತ್ತಿರ ಹೀಗೆ ಎಲ್ಲ ಕಡೆ ಭಾರಿ ಪ್ರಮಾಣದಲ್ಲಿ ಜನರು ಜಮಾಯಿಸಿದ್ದರು. ಹೋಟೆಲ್‌ಗಳಲ್ಲಿ, ಗುಲಾಲು ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಯಿತು. ವಿಜಯಶಾಲಿಯಾದ ಅಭ್ಯರ್ಥಿಗಳ ಬೆಂಬಲಿಗರು, ಗ್ರಾಮಸ್ಥರು ಗುಲಾಲು ಹಾಕಿ ಸಂಭ್ರಮಿಸಿದರು. ರಾಮದುರ್ಗ ರಸ್ತೆಯ ಎಲ್ಲ ಭಾಗಗಳಲ್ಲಿ ಜನವೋ ಜನ. ಹೋಟೆಲ್, ಚಹ ಅಂಗಡಿ, ಎಸ್‌ಬಿಐ ಬ್ಯಾಂಕ್ ಹತ್ತಿರ ಹೀಗೆ ಎಲ್ಲೆಂದರಲ್ಲಿ ಜನರೇ ಇದ್ದರು.

EndFragment