ಬಾದಾಮಿ: ರಾಜ್ಯದ 4 ನಿಗಮದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗೆ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ತಾಲೂಕು ಘಟಕದ ವತಿಯಿಂದ ಪಟ್ಟಣದ ಸಾರಿಗೆ ನೌಕರರು ಶುಕ್ರವಾರ ಮನವಿ ಸಲ್ಲಿಸಿದರು.
ಶುಕ್ರವಾರ ಬಾದಾಮಿಗೆ ಆಗಮಿಸಿದ ಶ್ರೀಗಳನ್ನು ಭೇಟಿ ಮಾಡಿದ ಸಾರಿಗೆ ನೌಕರರು ಮನವಿ ಸಲ್ಲಿಸಿ ಮಾತನಾಡಿ, ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಸಾರಿಗೆ ನಿಗಮನದಲ್ಲಿ ಕೆಲಸ ಮಾಡುತ್ತಿರುವ ನೌಕರರು ಬಹುತೇಕ ತಳ ಸಮುದಾಯ ಮತ್ತು ಹಿಂದುಳಿದ ಸಮಾಜಕ್ಕೆ ಸೇರಿದವರಾಗಿದ್ದು, ತಾವು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮನವಿ ಮಾಡಿದರು.
ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಎಸ್.ಎಸ್.ಮರಿಕೆಂಚಪ್ಪನ್ನವರ, ಸಾರಿಗೆ ನೌಕರರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಆರ್.ಎ.ಲೆಂಕೆನ್ನವರ, ಮಹಾಮಂಡಳದ ತಾಲೂಕು ಅಧ್ಯಕ್ಷ ವೈ.ವೈ.ಯಲಿಗಾರ, ಸಾರಿಗೆ ಸಿಬ್ಬಂದಿ ಜೆ.ಕೆ.ಹಿರೇಮಠ, ಸಿ.ಬಿ.ಕಾಚೆಟ್ಟಿ, ಬಸಪ್ಪ ತಳವಾರ, ಶಿವು ಚಿಮಲ, ಎಂ.ವೈ.ಚಿಮಲ, ಮಂಜು ಬೂದಿಹಾಳ, ಎ.ಆರ್.ರೋಣದ, ರವಿ ತಳವಾರ, ಮಲ್ಲಪ್ಪ ಬಸಾಪುರ, ಉಮೇಶ ಪೂಜಾರ, ಬಿ.ಬಿ.ರಾಠೋಡ ಇತರರು ಹಾಜರಿದ್ದರು.
EndFragment