ಬಾದಾಮಿ: ಸಮೀಪದ ಸುಕ್ಷೇತ್ರ ಬನಶಂಕರಿ ದೇವಿ ದೇವಸ್ಥಾನದಲ್ಲಿ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜ.9 ರಿಂದ 21ರವರೆಗೆ ನಡೆಯಲಿವೆ.
9 ರಂದು ಘಟಸ್ಥಾಪನೆ, ಧ್ವಜಾರೋಹಣ, 15 ರಂದು ಮಕರ ಸಂಕ್ರಮಣ, ಪೌಷ್ಯ ಶುದ್ಧ ತ್ರಯೋದಶಿ, 16 ಪಲ್ಲೇದ ಹಬ್ಬ, 17 ರಂದು ಸಂಜೆ 5 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. 21 ರಂದು ಸಂಜೆ 5 ಗಂಟೆಗೆ ಕಲಶ ಇಳಿಸಲಾಗುವುದು. ಭಕ್ತರು, ಸಾರ್ವಜನಿಕರು ಜಾತ್ರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರ್ಮನ್ ಎಂ.ಎಸ್.ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.