ಜಿಲ್ಲೆ

ವಿನಾಕಾರಣ ಬೈಯುತ್ತಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Haveri - Kariyappa Aralikatti

ಬ್ಯಾಡಗಿ: ಕುಟುಂಬದವರಿಗೆ ನಿತ್ಯವೂ ವಿನಾಕಾರಣ ಬೈಯುತ್ತಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಸುಭಾಸ ನಗರದಲ್ಲಿ ಮಂಗಳವಾರ ನಡೆದಿದೆ.
ಮಂಜು ಬಸವರಾಜ ಶಿಡೇನೂರ (22) ಮೃತ ಯುವಕ.
ಈತ ಎರಡ್ಮೂರು ವರ್ಷದಿಂದ ಮನೆಯವರೊಂದಿಗೆ ಯಾವುದೋ ವಿಚಾರ ಮನಸ್ಸಿನಲ್ಲಿ ಇಟ್ಟುಕೊಂಡು ವಿನಾಕಾರಣ ಬೈಯುತ್ತಿದ್ದನು. ಆದರೆ, ಎರಡು ದಿನದಿಂದ ಅತಿಯಾಗಿ ಬೈಯುತ್ತಿದ್ದ. ಮನೆಯಲ್ಲಿ ಕೊಠಡಿಯಲ್ಲಿದ್ದಾಗ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.