ಜಿಲ್ಲೆ

ಕನ್ಯೆ ಸಿಗಲಿಲ್ಲ ಎಂದು ಮನನೊಂದು ಕೃಷಿಕ ಆತ್ಮಹತ್ಯೆ

ಬ್ಯಾಡಗಿ: ಮದುವೆ ಮಾಡಿಕೊಳ್ಳಲು ಎಲ್ಲಿಯೂ ಕನ್ಯೆ ಸಿಗಲಿಲ್ಲ ಎನ್ನುವ ಕಾರಣ ಕೃಷಿಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಮಂಜು ರುದ್ರಪ್ಪ ನಾಗನೂರ (36) ಮೃತ ಕೃಷಿಕ.
ಈತ ವ್ಯವಸಾಯ ಮಾಡಿಕೊಂಡಿದ್ದು, ಹಲವು ವರ್ಷಗಳಿಂದ ಮದುವೆ ಮಾಡಿಕೊಳ್ಳುವ ಸಲುವಾಗಿ ಕನ್ಯೆ ಹುಡುಕುತ್ತಿದ್ದ. ಆದರೆ, ಎಷ್ಟೇ ಹುಡುಕಿದರೂ ಕನ್ಯೆ ದೊರೆತಿರಲಿಲ್ಲ. ಇದರಿಂದ ತನ್ನ ತಂದೆ-ತಾಯಿಗೆ ಅಡುಗೆ ಮಾಡಲು ತೊಂದರೆ ಆಗುತ್ತದೆ ಎಂದು ನೊಂದುಕೊಂಡಿದ್ದ.
ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯಲ್ಲಿಯೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.