ಜಿಲ್ಲೆ

ಮಾದಕ ದ್ರವ್ಯ ಆರೋಗ್ಯಕ್ಕೆ ಹಾನಿಕಾರಕ - ರವಿ ಹೆಬ್ಬಳ್ಳಿ

Gadag - Shivanand Hiremath

ಗದಗ ನಗರದ ಜಗದ್ಗುರು ತೋಂಟದಾರ್ಯ ಪ್ರಾಥಮಿಕ/ ಪ್ರೌಢ ಶಾಲೆಯಲ್ಲಿ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯದ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

ಗದಗ ಶಹರ ವಲಯದ ಕ್ಲಸ್ಟರ್ ನಂಬರ್ ನಾಗರ ಸಿ ಆರ್ ಪಿ ಗಳಾದ ಶ್ರೀ ರವಿ ಎಂ ಹೆಬ್ಬಳ್ಳಿ ರವರು ಮಾದಕ ದ್ರವ್ಯವು ಆರೋಗ್ಯಕ್ಕೆ ಹಾನಿಕಾರಕ. ಮನುಷ್ಯನ ಸಾಮಾನ್ಯವಾಗಿ ಅನೇಕ ಚಟ ಅಥವಾ ದುರಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ ಇಲ್ಲಿ ಚಟ ಎಂದರೆ ಇಷ್ಟು ದೊರಕಿದರೆ ಅಷ್ಟು ಬೇಕೆಂಬ ಆಸೆ, ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆಯನ್ನು ಹುಟ್ಟಿಸುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸವಾಗಿದೆ. ಆ ವಸ್ತುಗಳ ಸೇವನೆಗೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಕ್ರಿಯೆಗಳೆಲ್ಲ ಒಗ್ಗಿಹೋಗಿರುತ್ತೇವೆ ಇಂದು ಇಂತಹ ಅನೇಕ ಚಟಗಳಿಗೆ ನಮ್ಮ ಸಮಾಜವು ಬಲಿಯಾಗಿದೆ. ಮಾದಕ ದ್ರವ್ಯ ಸೇವಿಸುವ ಅಭ್ಯಾಸ ಹೊಂದಿರುವವರು ಮಾನಸಿಕ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಯುವಕರು ಮಧ್ಯ ವ್ಯಸನದಿಂದ ದೂರವಿದ್ದು, ತಮ್ಮ ಆರೋಗ್ಯದತ್ತ ಗಮನ ಹರಿಸಬೇಕು, ಉತ್ತಮ ಆಹಾರ  ಸೇವನೆಯಿಂದ ಉತ್ತಮ ಆರೋಗ್ಯ ಲಭಿಸುತ್ತದೆ. ಮಾದಕ ದ್ರವ್ಯ ಸೇವಿಸುವುದರಿಂದ ಅನೇಕ ರೋಗಗಳು, ಕಾಯಿಲೆಗಳು ಬರುವುದರೊಂದಿಗೆ ನಮ್ಮ  ಆಯಸ್ಸು ಕಡಿಮೆ ಆಗುತ್ತದೆ. ಮಾದಕ ದ್ರವ್ಯ ಸೇವಿಸುವುದರಿಂದ ಸಾವನ್ನು ಹತ್ತಿರ ಮಾಡಿಕೊಂಡಂತೆ ಹಾಗಾಗಿ ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವ್ಯಸನದಿಂದ ಆಗುವ ದುಷ್ಪರಿಮ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದರೊಂದಿಗೆ ಉತ್ತಮ ಸಮಾಜವನ್ನು ಕಟ್ಟುವಲ್ಲಿ ತಾವು ಕೂಡ ಪ್ರಮುಖ ಪಾತ್ರ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗದಗ ಶಹರ ವಲಯದ ಬಿ ಆರ್ ಪಿ ಶ್ರೀಮತಿ ಟಿ. ಎಸ್. ಹೂಗಾರ, ಬಿ ಐ ಆರ್ ಟಿ  ಶ್ರೀಮತಿ ಎ. ಡಿ. ಹುಗ್ಗೆನ್ನವರ್, ಪ್ರೌಢಶಾಲೆಯ ಪ್ರಧಾನ ಗುರುಗಳಾದ ಶ್ರೀ ಕೆ. ಎಂ. ಗೌಡರ್, ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಎನ್. ವಿ. ಗಾಳಿ, ಶಾಲೆಯ ಸಮಸ್ತ ಶಿಕ್ಷಕ/ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.