ರಾಯಚೂರು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ. 
ಜಿಲ್ಲೆ

ಹಿಂದುಳಿದ ವರ್ಗಗಳ ಮೀಸಲಾತಿ ಶೇ.40ಕ್ಕೆ ಹೆಚ್ಚಿಸಿ; ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಒತ್ತಾಯ

ರಾಯಚೂರು: ಈಗಾಗಲೇ ರಚನೆಯಾಗಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ವಾರ್ಷಿಕ 4 ಸಾವಿರ ಕೋಟಿ ರೂ. ನೀಡಬೇಕು. ಮೀಸಲಾತಿಯನ್ನು ಶೇ.40ಕ್ಕೆ ಹೆಚ್ಚಿಸಬೇಕು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಒತ್ತಾಯಿಸಿದರು.

ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋಟಿ ರೂ. ನೀಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ವಿವಿಧ ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಕೇವಲ 97 ಕೋಟಿ ರೂ. ನೀಡಿ ತಾರಮತ್ಯ ಮಾಡಿರುವುದು ಸರಿಯಲ್ಲ ಎಂದರು. ಒಕ್ಕೂಟದ ಪದಾಧಿಕಾರಿಗಳಾದ ಖಾಜನಗೌಡ, ಹನುಮಂತಪ್ಪ, ಬಿ.ಬಸವರಾಜ, ಜಂಬಣ್ಣ, ವಿಜಯಭಾಸ್ಕರ ಇಟಗಿ, ಭಗತರಾಜ್ ನಿಜಾಮಕರ್, ಟಿ.ಮಲ್ಲೇಶ, ಗುರು ವಿಶ್ವಕರ್ಮ ಹಾಗೂ ಇತರರಿದ್ದರು.