ವಿಜಯಪುರ: ಆದಿಕವಿ ಮಹಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಹಾಗೂ ವಿವಿಧ ಸಮುದಾಯ ಮತ್ತು ಸಂಘಟನೆಗಳಿಂದ ಒಮ್ಮತದ ನಿರ್ಧಾರ ಪ್ರಕಟಿಸಲಾಯಿತು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಾಲ್ಮೀಕಿ ಜಯಂತಿ ಹಿನ್ನೆಲೆ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಜಿಲ್ಲಾಡಳಿತದಿಂದ ಅ.17ರಂದು ಮರ್ಹಷಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 9.30ಕ್ಕೆ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ವಿವಿಧ ಕಲಾತಂಡಗಳೊಂದಿಗೆ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಗರದ ಮಾರುಕಟ್ಟೆ ರಸ್ತೆ ಮೂಲಕ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತದ ಮೂಲಕ ಶ್ರೀ ಕಂದಗಲ್ಲ ಹನುಮಂತರಾಯ ರಂಗಮಂದಿರದವಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ರಂಗಮಂದಿರದಲ್ಲಿ ಬೆಳಗ್ಗೆ 11ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಅಂದು ನಗರದ ವಿವಿಧ ವೃತ್ತಗಳಿಗೆ ಸ್ವಚ್ಚತೆ ಹಾಗೂ ದೀಪಾಲಂಕಾರಗೊಳಿಸುವಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸುವುದು, ವೇದಿಕೆ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸಂಬಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪೂರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರಶಾಂತ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಹೆಸ್ಕಾಂನ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರೆ, ವಿಜಯಪುರದ ಗ್ರೇಡ್ -2 ತಹಸೀಲ್ದಾರ್ ಐ.ಎಚ್. ತುಂಬಗಿ, ವಿವಿಧ ಸಂಘ ಸಂಸ್ಥೆಯ ಪಧಾದಿಕಾರಿಗಳಾದ ಅನೀಲ ಹೊಸಮನಿ, ಸೋಮು ಜಮಾದಾರ, ಆನಂದ ತಳವಾರ, ಶಿವಶರಣ ನಾಟೀಕಾರ, ಪ್ರಕಾಶ ಗುಡಿಮನಿ, ಮಹೇಶ ಮುರಾಳ, ಚಂದ್ರು ಡೊಗ್ರೋಜ್, ಸಂಗಪ್ಪ ತಳವಾರ, ಪರಶುರಾಮ ದಿಂಡವಾರ, ಮಳಸಿದ್ದ ನಾಯ್ಕೋಡಿ, ಶಾಸಪ್ಪ ಬಿಸಿನಾಳ, ನಿಂಗಪ್ಪ ನಾಟೀಕಾರ, ಸಂಜೀವಕುಮಾರ ನಾಯ್ಕೋಡಿ, ಮಲ್ಲಿಕಾರ್ಜುನ ಬಟಗಿ, ಬಿ.ಎಸ್.ಗಸ್ತಿ, ಅಶೋಕ ಚಲವಾದಿ, ಆನಂದ ಕೊಂಡಗೂಳಿ, ರಮೇಶ ದಳವಾಯಿ, ಬಿ.ಎಸ್.ಗಸ್ತಿ, ಹಣಮಂತ ಹಂಚನಾಳ, ಸದಾಶಿವ ಕೊಣ್ಣುರ, ಬಾಪು ಜ್ವಾಲಾಮುಖಿ, ಶಿವಾನಂದ ಹಿಪ್ಪರಗಿ, ಹಣಮಂತ ಚನ್ನಬಸಪ್ಪಗೋಳ, ರಂಗನಾಥ ಬತ್ತಾಸೆ, ಸಿದ್ದು ರಾಯಣ್ಣವರ, ವಿದ್ಯಾವತಿ ಅಂಕಲಗಿ, ಸೋಮನಗೌಡ ಕಲ್ಲೂರ, ದೇವೆಂದ್ರ ಮೇರೆಕರ ಮತ್ತಿತರರಿದ್ದರು.