ಜಿಲ್ಲೆ

ಮತ್ತೆ ಪುನುಗು ಬೆಕ್ಕು ಚರ್ಚೆಗೆ

Shivamogga - Desk - Praveena Kumar S

ಶಿಕಾರಿಪುರ: ಪುನುಗು ಬೆಕ್ಕು ಕಳೆದ ವಿಧಾನಸಭೆಯ ಚುನಾವಣೆಯ ಮುನ್ನ ಭಾರಿ ಸದ್ದು ಮಾಡಿತ್ತು. ಪುನುಗು ಬೆಕ್ಕು ಉಪಯೋಗಿಸಿ ಮಾಟ, ಮಂತ್ರ, ವಾಮಾಚಾರ ಕ್ಷುದ್ರ ಪ್ರಯೋಗ ಮಾಡಲಾಗಿತ್ತು ಎಂದು ಆರೋಪ ಮಾಡಲಾಗಿತ್ತು. ಈಗ ಮತ್ತೆ ಪುನುಗು ಬೆಕ್ಕು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಪಟ್ಟಣದ ಸಾಲೂರು ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಘವೇಂದ್ರ ಅವರ ತೋಟಕ್ಕೆ ಹೋಗುವ ಕ್ರಾಸ್‌ಗಿಂತ ಸ್ವಲ್ಪ ಮುಂದೆ ಪುನುಗು ಬೆಕ್ಕೊಂದು ಮುಖ್ಯರಸ್ತೆಯ ಬದಿಯಲ್ಲಿ ಸತ್ತು ಬಿದ್ದಿರುವುದು. ಕೆಲವರು ವಾಮಾಚಾರಕ್ಕೆ ಬಳಸಿರಬಹುದೆಂದರೆ, ಮತ್ತೆ ಕೆಲವರು ಗುಡ್ಡಗಳಲ್ಲಿ ಈ ಬೆಕ್ಕುಗಳಿವೆ. ರಸ್ತೆ ದಾಟುವಾಗ ವಾಹನಕ್ಕೆ ಸಿಲುಕಿ ಸಾವನ್ನಪ್ಪಿರಬಹುದು ಎನ್ನುತ್ತಾರೆ. ಲೋಕಸಭೆ ಚುನಾವಣೆ ಮುಂದಿರುವುದರಿಂದ ಪುನುಗು ಬೆಕ್ಕಿನ ವಿಚಾರಕ್ಕೆ ರೆಕ್ಕೆ ಪುಕ್ಕಗಳು ಹುಟ್ಟುತ್ತಿವೆ.