ಜಿಲ್ಲೆ

ಎತ್ತಿ ಆಡಿಸುವ ವೇಳೆ ನೆಲಕ್ಕೆ ಬಿದ್ದು ಮಗು ಗಂಭೀರ

Udupi

ಹೆಬ್ರಿ: ಶಿವಪುರ ಗ್ರಾಮದ ಮುಳ್ಳುಗುಡ್ಡೆಯಲ್ಲಿ ಮಗುವನ್ನು ಎತ್ತಿ ಆಡಿಸುವ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಜನತಾ ಕಾಲನಿಯ ಕೃಷ್ಣ -ಶಕುಂತಳಾ ದಂಪತಿಯ ಎರಡೂವರೆ ವರ್ಷದ ಸಾಕ್ಷಿ ಗಂಭೀರ ಗಾಯಗೊಂಡ ಮಗು.

ಮಂಗಳವಾರ ರಾತ್ರಿ ಮನೆಯ ಸಮೀಪದಲ್ಲಿ ಗುಡ್ಡದ ದೈವಕ್ಕೆ ತಂಬಿಲ ಇದ್ದ ಕಾರಣ ಸಂಬಂಧಿಕ ರಾಜು ಎಂಬುವರು ಬಂದಿದ್ದರು. ಮನೆಯ ಚಾವಡಿಯಲ್ಲಿ ಮಗು ಆಟವಾಡುತ್ತಿರುವಾಗ ರಾಜು ಮಗುವನ್ನು ಎರಡು ಕೈಯಿಂದ ಎತ್ತಿ ಆಡಿಸಿದ್ದಾರೆ. ಈ ವೇಳೆ ರಾಜು ಕೈಯಿಂದ ಮಗು ನೆಲಕ್ಕೆ ಜಾರಿ ಬಿದ್ದ ಪರಿಣಾಮವಾಗಿ ಮಗುವಿನ ಎಡ ಕಿವಿಯ ಬಳಿ ತೀವ್ರಸ್ವರೂಪದ ಗಾಯಗಳಾಗಿವೆ. ರಾಜು ನಿರ್ಲಕ್ಷೃದಿಂದ ಘಟನೆ ನಡೆದಿದೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.