ಹರಪನಹಳ್ಳಿ ತಾಲೂಕಿನ ಅರಸೀಕೆೆರೆಯಲ್ಲಿ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಪಿಡಿಒ ಅಂಜಿನಪ್ಪ, ಗ್ರಾಪಂ ಅಧ್ಯಕ್ಷ ಎ.ಇನಾಯತ್ ವುಲ್ಲಾ, ಅಂಗನವಾಡಿ ಮೇಲ್ವಿಚಾರಕಿ ರತ್ನಮ್ಮ ಬಾರ್ಕಿ, ಪ್ರಮುಖರಾದ ಎಂ.ಚಂದ್ರಪ್ಪ, ಗೌರಮ್ಮ, ಭುವನೇಶ್ವರಿ, ರೇಖಾ, ಶಿವಕುಮಾರ್, ಬಸಮ್ಮ ಇತರರಿದ್ದರು. 
ಜಿಲ್ಲೆ

ಮಗುವಿನ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸಿ

ಹರಪನಹಳ್ಳಿ: ಗರ್ಭಿಣಿಯರು ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದು ಅರಸೀಕೆರೆ ಸಮುದಾಯ ಅರೋಗ್ಯ ಕೇಂದ್ರ ವೈದ್ಯಾಧಿಕಾರಿ ಸುದರ್ಶನ್ ತಿಳಿಸಿದರು.

ಅರಸೀಕೆರೆ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಪಂ ಹಾಗೂ ತಾಲೂಕು ಆಡಳಿತ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಮದಲ್ಲಿ ಮಾತನಾಡಿದರು.

ಜನಿಸುವ ಮಗು ಆರೋಗ್ಯಯುತವಾಗಿ ಇರಬೇಕೆಂದರೆ ಪೌಷ್ಟಿಕ ಆಹಾರ, ಹಸಿ ತರಕಾರಿ, ಹಾಲು, ಹಣ್ಣುಗಳನ್ನು ಹೆಚ್ಚಾಗಿ ಬಳಸಬೇಕು ಎಂದರು. ಪೋಷಣ್ ಮಾಸಾಚರಣೆ ಸಂಯೋಜಕ ನಿಂಗರಾಜ್ ಮಾತನಾಡಿ, ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಸರ್ಕಾರ ಮಕ್ಕಳ ಅರೋಗ್ಯ ಸುಧಾರಣೆಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಗುತ್ತದೆ ಎಂದರು.