ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಕ್ಕಳಲ್ಲಿ ಫುಟ್ಬಾಲ್ ಆಟದ ಆಸಕ್ತಿ ಮೂಡಿಸಲು ಕೊಡಗಿನಲ್ಲಿ ಪ್ರಥಮ ಬಾರಿಗೆ ಬೇಬಿ ಫುಟ್ಬಾಲ್ ಲೀಗ್ ಆಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಹೇಳಿದ್ದಾರೆ.
ವೀರಾಜಪೇಟೆ ಪ್ರಗತಿ ವಿದ್ಯಾಸಂಸ್ಥೆ ಹಾಗೂ ಕೊಡಗು ವೆಲ್ಫೇರ್ ಫೌಂಡೇಷನ್ ವತಿಯಿಂದ ಡಿ. ೩೧ ರಿಂದ ಬೇಬಿ ಫುಟ್ಬಾಲ್ ಲೀಗ್ ಪ್ರಾರಂಭ ವಾಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
೪ ಹಂತದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಡಿ.೩೧ ರಂದು ಪ್ರಗತಿ ವಿದ್ಯಾಸಂಸ್ಥೆ ಮೈದಾನದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತದೆ. ಜನವರಿ ೧, ೭, ೮, ೧೪, ೧೫, ೨೧, ೨೨ ರಂದು ಪಂದ್ಯಾವಳಿ ನಡೆಯಲಿವೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಜ. ೨೮ ಹಾಗೂ ೨೯ ರಂದು ಅಮ್ಮತ್ತಿ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ.
ಅಖಿಲ ಭಾರತ ಮಟ್ಟದ ಫುಟ್ಬಾಲ್ ಪಂದ್ಯಾವಳಿ ಅಮ್ಮತ್ತಿಯಲ್ಲಿ ಆಯೋಜಿಸಲ್ಪಟ್ಟಿದ್ದು, ಈ ವೇಳೆ ಬೇಬಿ ಫುಟ್ಬಾಲ್ ಲೀಗ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಅಂತಾರಾಷ್ಟ್ರೀಯ ಆಟಗಾರರ ಮುಂದೆ ಮಕ್ಕಳು ಆಡುವ ಅವಕಾಶ ಕಲ್ಪಿಸಲಾಗಿದೆ. ಆಟದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಫುಟ್ಬಾಲ್ ತರಬೇತಿ ನೀಡಲಾಗುತ್ತಿದೆ ಎಂದರು.
೧೦ ವರ್ಷದೊಳಗಿನ ಪಂದ್ಯಾಟಕ್ಕೆ ವೀರಾಜಪೇಟೆಯ ೪, ಅಮ್ಮತ್ತಿಯ ೧ ತಂಡ, ೧೨ ವರ್ಷದೊಳಗಿನ ವಿಭಾಗದಲ್ಲಿ ವೀರಾಜಪೇಟೆಯ ೫, ಅಮ್ಮತ್ತಿಯ ೧ , ೧೪ ವರ್ಷದೊಳಗಿನ ವಿಭಾಗದಲ್ಲಿ ವೀರಾಜಪೇಟೆಯ ೩, ಅಮ್ಮತ್ತಿ, ಹುಂಡಿ ಹಾಗೂ ಹುಣಸೂರಿನ ತಲಾ ೧ ತಂಡಗಳು ಭಾಗವಹಿಸಲಿವೆ. ಒಂದು ತಂಡದಲ್ಲಿ ೫ ಜನ ಆಟಗಾರರ ಆಡಲಿದ್ದಾರೆ. ಪ್ರತಿ ಪಂದ್ಯಾಟ ೨೦ ನಿಮಿಷ ನಡೆಯಲಿವೆ ಎಂದು ಮಾದಂಡ ತಿಮ್ಮಯ್ಯ ಮಾಹಿತಿ ನೀಡಿದರು. ಪಂದ್ಯಾವಳಿ ನಿರ್ದೇಶಕ ಸುಭಾಷ್, ಸಹಸಂಚಾಲಕ ಕವಿತೇಜ್, ತಾಂತ್ರಿಕ ನಿರ್ದೇಶಕ ದಿವಿನ್ ಗೋಷ್ಠಿಯಲ್ಲಿದ್ದರು.