ಜಿಲ್ಲೆ

ಗೊಬ್ಬರ ಗುಂಡಿಗೆ ಬಿದ್ದು ಮಗು ಸಾವು

Uttara Kannada - Subash Hegde
ಅಂಕೋಲಾ : ದನದ ಕೊಟ್ಟಿಗೆ ಬಳಿ ಆಡಿಕೊಂಡಿದ್ದ ಪುಟ್ಟ ಮಗು ಕೊಟ್ಟಿಗೆ ಪಕ್ಕದಲ್ಲಿದ್ದ ಗೊಬ್ಬರದ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ.
ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2) ಮೃತಪಟ್ಟ ಮಗುವಾಗಿದ್ದಾಳೆ. ಈಕೆ ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್ ಮತ್ತು ರೂಪಾ ದಂಪತಿಯ ದ್ವಿತೀಯ ಪುತ್ರಿಯಾಗಿದ್ದಳು.
ಬೆಳಿಗ್ಗೆ ಎಂದಿನಂತೆ ಸಾದ್ವಿ ಅಪ್ಪನೊಂದಿಗೆ ದನದ ಕೊಟ್ಟಿಗೆ ಬಳಿ ತೆರಳಿದ್ದಾಳೆ, ತಂದೆ ಕೊಟ್ಟಿಗೆಯ ಕೆಲಸದಲ್ಲಿ ತೊಡಗಿದ್ದಾಗ ಅಲ್ಲಿಯೇ ಮಗು ಆಡಿಕೊಂಡಿದ್ದಳು. ಹೀಗಾಗಿ ತಂದೆ ಕೊಟ್ಟಿಗೆ ಕೆಲಸದಲ್ಲಿ ಮಗ್ನರಾಗಿದ್ದರು. ಕೆಲ ಸಮಯದ ಬಳಿಕ ಮಗುವಿನ ಸದ್ದು ಬಾರದಿದ್ದಾಗ ಕೊಟ್ಟಿಗೆಯ ಸುತ್ತ ಮುತ್ತ ಹುಡುಕಾಟ ನಡೆಸಿದ್ದಾನೆ. ಗೊಬ್ಬರ ಗುಂಡಿ ಬಳಿ ಹುಡುಕಾಡಿದ ಸಂದರ್ಭದಲ್ಲಿ ಕೊನೆಗೆ ಮಗು ಸಾದ್ವಿ ಗೊಬ್ಬರ ಗುಂಡಿಯಲ್ಲಿ ಬಿದ್ದಿರುವುದು ಕಂಡುಬAದಿದೆ. ತಕ್ಷಣ ಮಗುವನ್ನು ಗುಂಡಿಯಿAದ ಮೇಲಕೆತ್ತಿ ಅಂಕೋಲಾ ತಾಲೂಕಾಸ್ಪತ್ರೆಗೆ ಕರೆತಂದಿದ್ದಾರೆ, ವೈದ್ಯರು ಪರೀಕ್ಷಿಸಿದಾಗ ಮಗು ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಆಗಷ್ಟೆ ಹೆಜ್ಜೆ ಹಾಕುತ್ತಿದ್ದ ಪುಟ್ಟ ಮಗುವಿನ ಸಾವಿನ ಸುದ್ದಿಯಿಂದ ಈಡಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.