ತೇರದಾಳ-ಶೇಗುಣಸಿ ರಸ್ತೆಯಲ್ಲಿರುವ ರೈತ ಶ್ರೇಯಾಂಶ ನಾಸಿ ಅವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಕಂಡು ಬಂದ ಮೊಸಳೆ ಮರಿ. 
ಜಿಲ್ಲೆ

ಬಾವಿಯಲ್ಲಿ ಮೊಸಳೆ ಮರಿಗಳು ಪತ್ತೆ

ದತ್ತಾತ್ರೇಯ ಪಿ ಕುಲಕರ್ಣಿ

ತೇರದಾಳ: ಪಟ್ಟಣದ ಶೇಗುಣಸಿ ರಸ್ತೆಯಲ್ಲಿರುವ ರೈತ ಶ್ರೇಯಾಂಶ ಸುಭಾಸ ನಾಸಿ ಎಂಬುವವರಿಗೆ ಸೇರಿದ ಬಾವಿಯಲ್ಲಿ ಹತ್ತಕ್ಕೂ ಅಧಿಕ ಮೊಸಳೆ ಮರಿಗಳು ಕಂಡು ಬಂದಿದೆ. ಕಳೆದ ತಿಂಗಳಷ್ಟೇ ಇದೇ ಬಾವಿಯ ಬಳಿಯಿದ್ದ ನಾಲ್ಕು ಮೊಸಳೆ ಮರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿದುಕೊಂಡು ಹೋಗಿ ನದಿಗೆ ಬಿಟ್ಟಿದ್ದರು.

ರೈತನ ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೊಸಳೆ ಮರಿಗಳನ್ನು ಹಿಡಿಯಲು ಮುಂದಾಗಿದ್ದು, ಬಾವಿಯಲ್ಲಿ ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ಮೊಸಳೆ ಹಿಡಿಯುವುದು ಸವಾಲಾಗಿದೆ. ಹೀಗಾಗಿ ಅರಣ್ಯ ಸಿಬ್ಬಂದಿ ಮೀನುಗಾರರ ಮೊರೆ ಹೋಗಿದೆ.

ಆದರೆ ಅರಣ್ಯ ಇಲಾಖೆಯವರಿಗೆ ಹಿಡಿದ ಮೊಸಳೆಯನ್ನು ಸಾಗಾಟ ಮಾಡಲಷ್ಟೇ ಅವಕಾಶವಿದ್ದು, ಮೊಸಳೆ ಹಿಡಿಯುವ ಮೀನುಗಾರರಿಗೆ ಹಣಕೊಡಲು ಅವಕಾಶವಿಲ್ಲವಂತೆ. ಸ್ಥಳೀಯ ಸಂಸ್ಥೆಗಳ ಖಾತೆಗೆ ಖರ್ಚು ಹಾಕಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ನದಿಗೆ ಬಿಡಬೇಕಿದೆ ಎಂದು ಇಲಾಖೆ ಸಿಬ್ಬಂದಿ ಎಂ.ಎಸ್. ನಾವಿ ಹೇಳುತ್ತಾರೆ. ಒಟ್ಟಿನಲ್ಲಿ ಅರಣ್ಯ ಇಲಾಖೆ ವಿಭಾಗ ಮಟ್ಟದ ಅಧಿಕಾರಿಗಳು ಸರ್ಕಾರದ ಸಹಾಯಧನದಲ್ಲಿ ಮೊಸಳೆ ಹಿಡಿದು, ರೈತನ ಆತಂಕ ದೂರಮಾಡಬೇಕಿದೆ.