ಸೋಮವಾರಪೇಟೆ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬೇಬಿ ಚಂದ್ರಹಾಸ್ ಮತ್ತು ಉಪಾಧ್ಯಕ್ಷರಾಗಿ ಉಮಾ ರುದ್ರಪ್ರಸಾದ್ ಆಯ್ಕೆಯಾದರು.  
ಜಿಲ್ಲೆ

ಬೇಬಿ ಚಂದ್ರಹಾಸ್ ಅಧ್ಯಕ್ಷೆ, ಉಮಾ ಉಪಾಧ್ಯಕ್ಷೆ

ಸೋಮವಾರಪೇಟೆ: ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬೇಬಿ ಚಂದ್ರಹಾಸ್ ಮತ್ತು ಉಪಾಧ್ಯಕ್ಷರಾಗಿ ಉಮಾ ರುದ್ರಪ್ರಸಾದ್ ಆಯ್ಕೆಯಾದರು.

ಗುರುವಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಪ್ರಕಟಿಸಲಾಯಿತು. ಸಂಘದ ನಿರ್ದೇಶಕರಾದ ಲೋಕೇಶ್ವರಿ ಗೋಪಾಲ್, ಜಲಜಾ ಶೇಖರ್, ಕವಿತಾ ವಿರೂಪಾಕ್ಷ, ಬಿ.ಕೆ.ವಿದ್ಯಾ, ಉಮಾ, ಕೆ.ಎಸ್.ಚಂದ್ರಾವತಿ, ವರಲಕ್ಷ್ಮೀ ಸಿದ್ದೇಶ್ವರ್, ಕೆ.ಎ.ಮಂಜುಳಾ, ಜೀತಾಶ್ರೀ, ಎಸ್.ಬಿ.ಗೀತಾ, ಎಸ್.ಬಿ.ಮೀನಾಕ್ಷಿ, ಎಚ್.ಎಂ. ರಂಜಿತ ಇದ್ದರು.