ಜಿಲ್ಲೆ

ಆಂಬುಲೆನ್ಸ್‌ನಲ್ಲೇ ಮಗುವಿಗೆ ಜನನ

Mysuru - Desk - Ravikumar


ಮಡಿಕೇರಿ: ಸೋಮವಾರಪೇಟೆ ಸಮೀಪದ ಅಬ್ಬೂರುಕಟ್ಟೆ ಗಿರಿಜನ ಹಾಡಿಯ ನಿವಾಸಿ ಬೇಬಿ ಎಂಬುವರು ಆಂಬುಲೆನ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗುರುವಾರ ತಡರಾತ್ರಿ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.

ಈ ವೇಳೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ 108ರ ಸ್ಪಾಫ್ ನರ್ಸ್ ಮಮತಾ ಮತ್ತು ಚಾಲಕ ಅರುಕುಮಾರ್ ಆಂಬುಲೆನ್ಸ್‌ನಲ್ಲೇ ಸುರಕ್ಷಿತವಾಗಿ ಸ್ವಾಭಾವಿಕ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಾಯಿ, ಮಗುವನ್ನು ಸೋಮವಾರಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.