ಲಿಂಗಸುಗೂರು: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಮಂಗಳವಾರ ನಡೆಯಿತು. ಪುರಸಭೆ ಅಧ್ಯಕ್ಷರಾಗಿ ಬಾಬುರಡ್ಡಿ ಮುನ್ನೂರು ಹಾಗೂ ಉಪಾಧ್ಯಕ್ಷರಾಗಿ ಶರಣಮ್ಮ ಅಮರಪ್ಪ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ತಹಸೀಲ್ದಾರ್, ಚುನಾವಣಾಧಿಕಾರಿ ಶಂಶಾಲಂ ಪ್ರಕಟಿಸಿದರು.
ಬಾಬುರಡ್ಡಿಗೆ ರುದ್ರಪ್ಪ ಬ್ಯಾಗಿ ಸೂಚಕ ಹಾಗೂ ರೌಫ್ ಗ್ಯಾರಂಟಿ ಅನುಮೋದಕರಾಗಿದ್ದರು. ಶರಣಮ್ಮಗೆ ಅಬ್ದುಲ್ ರಫಿ ಸೂಚಕ ಹಾಗೂ ಶಿವರಾಯ ದೇಗುಲಮಡಿ ಅನುಮೋದಕರಾಗಿದ್ದರು. ಸಂಸದ ಜಿ.ಕುಮಾರ ನಾಯಕ, ಸದಸ್ಯರಾದ ಶರಣಪ್ಪ ಕೆಂಗೇರಿ, ರಾಜೇಶ್ವರಿ ಪ್ರಭುಸ್ವಾಮಿ, ಕುಪ್ಪಮ್ಮ ಬಸವರಾಜ, ಮುಖ್ಯಾಧಿಕಾರಿ ರಡ್ಡಿ ರಾಯನಗೌಡ, ಸಿಬ್ಬಂದಿ ಇದ್ದರು.