ರೇವತಗಾಂವ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾ. ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು. ಮಾದೇವ ಪೂಜಾರಿ, ಸುಚಿತ್ರಾ ಅಂಕಲಗಿ, ಎಸ್.ಎಂ. ಮಾಳಿ ಇತರರಿದ್ದ 
ಜಿಲ್ಲೆ

ದೇಶಕ್ಕೆ ಬಾಬೂಜಿ ಕೊಡುಗೆ ಅಪಾರ

Vijayapura - Desk - Gurappa Lokuri

ರೇವತಗಾಂವ: ಡಾ. ಬಾಬು ಜಗಜೀವನರಾಮ್ ತಮ್ಮ ಬದುಕಿನುದ್ದಕ್ಕೂ ಎಲ್ಲ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಗ್ರಾಪಂ ಕಾರ್ಯದರ್ಶಿ ಮಾದೇವ ಪೂಜಾರಿ ಹೇಳಿದರು.

ಸ್ಥಳೀಯ ಗ್ರಾಪಂ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆ ತೊಡೆದು ಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದರು.

ಗ್ರಂಥಪಾಲಕರಾದ ಸುಚಿತ್ರಾ ಅಂಕಲಗಿ ಮಾತನಾಡಿದರು.

ಪುನರ್ವಸತಿ ಕಾರ್ಯಕರ್ತ ಎಸ್.ಎಂ. ಮಾಳಿ, ಕಂಪ್ಯೂಟರ್ ಆಪರೇಟರ್ ಲಾಲಪ್ಪ ಬೀರುಣಗಿ, ವಾಟರ್‌ಮನ್ ಸುರೇಶ ಹಕ್ಕೆ ಬಿಲ್ ಕಲೆಕ್ಟರ್ ಲಾಯಪ್ಪ ಲೋಣಿ ಇತರರಿದ್ದರು.