ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಪುಣ್ಯಸ್ಮರಣೆ ಆಚರಿಸಲಾಯಿತು. ತಹಸೀಲ್ದಾರ್ ಶಿವರಾಜ, ಪ್ರಮುಖರಾದ ಕೆ.ವಿರೂಪಾಕ್ಷಿ, ಎಂ.ಆರ್.ಷಣ್ಮುಖ, ಎಸ್.ಡಿ.ರಮೇಶ್, ವಿಜಯಕುಮಾರ್ ಇತರರಿದ್ದರು. 
ಜಿಲ್ಲೆ

ದಲಿತರ ಹಕ್ಕುಗಳಿಗಾಗಿ ಹೋರಾಡಿದ ಬಾಬೂಜೀ

ಕಂಪ್ಲಿ: ಡಾ.ಬಾಬುಜಗಜೀವನ ರಾಮ್ ಸ್ವಾತಂತ್ರ್ಯ ಹೋರಾಟಗಾರರು, ಹಸಿರು ಕ್ರಾಂತಿ ಹರಿಕಾರರು, ಸಮಾಜ ಸೇವಕರಾಗಿದ್ದರು ಎಂದು ತಹಸೀಲ್ದಾರ್ ಶಿವರಾಜ ಹೇಳಿದರು.

ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಲಿತರ ಹಕ್ಕುಗಳಿಗಾಗಿ ಪ್ರತಿಪಾದಿಸಿದ್ದಲ್ಲದೆ, ಅಸ್ಪಶ್ಯತಾ ನಿವಾರಣೆಗೆ ಹೋರಾಡಿದರು. ಕೇಂದ್ರದ ಆಹಾರ ಮತ್ತು ಕೃಷಿ ಸಚಿವರಾಗಿದ್ದಾಗ ಹಸಿರು ಕ್ರಾಂತಿಯನ್ನು ಯಶಸ್ವಿಯಾಗಿ ಮುನ್ನಡೆಸಿದರು ಎಂದರು.

ನಿಲಯ ಪಾಲಕ ಕೆ.ವಿರೂಪಾಕ್ಷಿ ಮಾತನಾಡಿ, ಡಾ.ಜಗಜೀವನ ರಾಮ್ ಅವರು ದಕ್ಷ, ಪ್ರಾಮಾಣಿಕ ಮತ್ತು ಮಾನವೀಯ ಕಳಕಳಿಯುಳ್ಳ ರಾಜಕಾರಣಿಯಾಗಿದ್ದು, ಅವರ ತತ್ವಾದರ್ಶಗಳು ಮಾದರಿಯಾಗಿವೆ ಎಂದರು.

ಗ್ರೇಡ್-1 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಶಿರಸ್ತೇದಾರ್ ಎಸ್.ಡಿ.ರಮೇಶ್, ವಿಎ ವಿಜಯಕುಮಾರ್, ಅಶ್ವಿನಿ, ವನಿತಾ, ಸಿಬ್ಬಂದಿ ಮಾಲತೇಶ ದೇಶಪಾಂಡೆ, ರಾಧಾ, ಮೂಗಮ್ಮ, ಆಶಾ, ಕುಸುಮಾ, ಅಚ್ಯುತಾ, ಗುರುಸಿದ್ದೇಶ, ವಕೀಲ ರುದ್ರಪ್ಪ ಇತರರಿದ್ದರು.