ಜಿಲ್ಲೆ

ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಬಲೀಂದ್ರ ಪೂಜೆ

Mangaluru - Hariprasad Rai



ಮಂಗಳೂರು : ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ನಗರದ ಸೂಟರ್‌ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಬಲೀಂದ್ರ ಪೂಜೆಯನ್ನು ಪಾರಂಪರಿಕ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೈವಸ್ಥಾನದ ಗುರಿಕಾರ ಎಸ್.ರಾಘವೇಂದ್ರ ಅವರು ಬಲೀಂದ್ರ ಪೂಜೆಯ ಮಹತ್ವವನ್ನು ವಿವರಿಸಿದರು. ದಾನಶೂರ ಬಲಿ ಚಕ್ರವರ್ತಿ ವಾಮನನಾದ ಶ್ರೀಹರಿಯ ಕೃಪೆಗೆ ಪಾತ್ರನಾಗುತ್ತಾನೆ. ವಾಮನನಾಗಿ ಬಂದ ದೇವರು ತ್ರಿವಿಕ್ರಮನಾಗಿ ಬೆಳೆದು ಬಲಿಯನ್ನು ಅನುಗ್ರಹಿಸುವ ಸಂಗತಿ ಮಾತ್ರ ಬಲಿಯ ನೈತಿಕತೆ ಶ್ರೇಷ್ಠತೆಯನ್ನಾಗಿ ಜನಪದರು ದೀಪಾವಳಿಯಂದು ಸ್ತುತಿಸುತ್ತಾರೆ ಎಂದು ಅವರು ಹೇಳಿದರು.
ದೈವಸ್ದಾನದ ಗೌರವ ಸಲಹೆಗಾರರಾದ ಕೆ.ಪಾಂಡುರಂಗ, ಎಸ್.ಬಾಬು, ಅರ್ಚಕ ಎಸ್. ಗಣೇಶ , ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್ಚಂದ್ರ ಅಂಚನ್, ಕೋಶಾಧಿಕಾರಿ ಎಸ್.ನವೀನ್, ಪದಾಧಿಕಾರಿಗಳಾದ ಎಸ್.ಮೋಹನ್, ಬಿ.ವಿಶ್ವನಾಥ ಸಾಲ್ಯಾನ್, ಎಸ್.ಜನಾರ್ದನ, ಬಿ.ಗಣೇಶ್, ಎಸ್. ವಸಂತ , ಎಸ್.ಸುರೇಶ್, ಎಸ್.ಉಪೇಂದ್ರ , ಎಸ್. ಪ್ರವೀಣ್, ರಂಜಿತ್, ಉಮಾಪ್ರಸಾದ್ , ಪುರುಷೋತ್ತಮ ಪದಕಣ್ಣಾಯ , ಸುನಿಲ್ರಾಜ್ ಪದಕಣ್ಣಾಯ , ಕಿರಣ್‌ರಾಜ್ ಪದಕಣ್ಣಾಯ , ಅಪ್ಪಿ ಎಸ್. ಸುದೇಶ್ ಕುಮಾರ್, ತಿಲಕ್‌ರಾಜ್ , ರಾಹುಲ್ ಎಸ್, ಸಂತೋಷಕುಮಾರಿ , ಸಂದೀಪ್, ಕಿಶೋರ್, ರಕ್ಷಿತ್, ನಳಿನಿ, ಅನ್ನಪೂರ್ಣ ರಘುರಾಮ್, ಇಂದಿರಾ ಮೋಹನ್‌ದಾಸ್, ಪ್ರಶಾಂತ್ ಪಿ.ಎಸ್. ಪ್ರವೀಣ್ ಪಿ.ಎಸ್, ಪ್ರಥ್ವೀಶ್ ಪಿ.ಎಸ್, ಸೂರಜ್ ಸಾಗರ್, ಪ್ರದೀಪ್ , ರಕ್ಷಿತ್ ಬಿ.ಎಸ್, ದೀಕ್ಷಿತ್ ಬಿ.ಎಸ್.ಉಪಸ್ಥಿತರಿದ್ದರು .