ಜಿಲ್ಲೆ

ಬಾಬಾಸಾಹೇಬ್​ ಯುವ ಜನಾಂಗಕ್ಕೆ ಮಾದರಿ

ಸವದತ್ತಿ: ಸಾಮಾಜಿಕ ಅಭಿವೃದ್ಧಿಗೆ ಅಂಬೇಡ್ಕರ್​ ಕೊಡುಗೆ ಅಪಾರವಾಗಿದೆ. ಅವರ ಆದರ್ಶ ತತ್ತ್ವಗಳು ಯುವ ಜನಾಂಗಕ್ಕೆ ಮಾದರಿಯಾಗಿವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಕೀರ್ತಿ ಬಾಬಾಸಾಹೇಬ ಅಂಬೇಡ್ಕರ್​ ಅವರಿಗೆ ಸಲ್ಲುತ್ತದೆ. ದೇಶದ ಪ್ರತಿ ಸಮಸ್ಯೆಗೆ ಸಂವಿಧಾನದಲ್ಲಿ ಪರಿಹಾರವಿದೆ. ಹೋರಾಟದ ಮೂಲಕ ದಲಿತರು ಹಾಗೂ ಮಹಿಳೆಯರಿಗೆ ಹಕ್ಕು ದೊರಕಿಸಿದ ಮಹಾನ್​ ವ್ಯಕ್ತಿ ಅಂಬೇಡ್ಕರ್​ ಅವರು ಶಿಣ ಮತ್ತು ಸಬಲೀಕರಣದಿಂದ ಅಸಮಾನತೆ ಹೋಗಲಾಡಿಸುವಲ್ಲಿ ಶ್ರಮಿಸಿದರು ಎಂದರು. ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಹಿತಿ ಡಾ.ವೈ.ಎನ್​.ಯಾಕೊಳ್ಳಿ ಉಪನ್ಯಾಸ ನೀಡಿದರು. ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್​ಟ್ಯಾಪ್​ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿನ ಡಾ.ಬಿ.ಆರ್​.ಅಂಬೇಡ್ಕರ್​ ಪ್ರತಿಮೆಗೆ ಶಾಸಕ ವಿಶ್ವಾಸ ವೈದ್ಯ ಪುಷ್ಮನಮನ ಸಲ್ಲಿಸಿದರು. ಅಂಬೇಡ್ಕರ್​ ನಗರದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ತಾಪಂ ಇಒ ಆನಂದ ಬಡಕುಂದ್ರಿ, ಬಿಇಒ ಮೋಹನ ದಂಡಿನ, ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರ ಕಾರ್ಯದರ್ಶಿ ಅಶೋಕ ದುಡಗುಂಟಿ, ಸಮಾಜ ಕಲ್ಯಾಣಾಧಿಕಾರಿ ಆರ್​.ಆರ್​.ಕುಲಕರ್ಣಿ, ಪುರಸಭೆ ಮುಖ್ಯಧಿಕಾರಿ ಸಂಗನಬಸಯ್ಯ ಗದಗಿಮಠ, ಎಪಿಎಂಸಿ ಅಧ್ಯ ಚಂದ್ರು ಪೂಜೇರ, ಸಿಡಿಪಿಒ ಸುನೀತಾ ಪಾಟೀಲ, ಮುಖಂಡರಾದ ಯಲ್ಲಪ್ಪ ಅಮಾತೆನ್ನವರ, ಯಲ್ಲಪ್ಪ ಗೊರವನಕೊಳ್ಳ, ಬಸವರಾಜ ತಳವಾರ, ಶಿವಾನಂದ ಅಮಾತೆನ್ನವರ, ರಾವೇಂದ್ರ ಪೂಜಾರ, ರವಿ ದೊಡ್ಡಮನಿ, ಅಶೋಕ ಮುತ್ತಿನ ಇತರರಿದ್ದರು.