ಮೈಸೂರು: ಬಾಬಾ ಸಾಹೇಬರ ಬದುಕು-ಬರಹ ಮತ್ತು ಹೋರಾಟವೇ ಭಾರತಕ್ಕೆ ಸ್ಪೂರ್ತಿಯಾಗಿದೆ. ಇದರ ಸೇವೆಯನ್ನು ಭಾರತ ಸರಿಯಾದ ರೀತಿಯಲ್ಲಿ ಬಳಸಿಕೊಂಡಿದ್ದರೆ ಇನ್ನೂ ವೇಗವಾಗಿ ಮುನ್ನಡೆಯುತ್ತಿತ್ತು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ವರ್ಷದ ಜಯಂತಿ ಅಂಗವಾಗಿ ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಒಳಗೊಳ್ಳುವ ಸಮಾಜದ ರೂವಾರಿಯಾಗಿ ಅಂಬೇಡ್ಕರ್’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೈದರಾಬಾದ್ ಕೇಂದ್ರೀಯ ವಿವಿಯ ಪ್ರೊ.ಪಿ.ತಿರುಮಾಳ್ ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ಪಿಎಚ್.ಡಿ.ಪದವೀಧರರು, ಸ್ನಾತಕೋತ್ತರ, ಸ್ನಾತಕ ಪದವಿಗಳಲ್ಲಿ ಪ್ರಥಮ ರ‌್ಯಾಂಕ್ ಪಡೆದವರನ್ನು ಅಭಿನಂದಿಸಲಾಯಿತು.
ಕುಲಸಚಿವ ಡಾ.ಬಸಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ, ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕದ ಉಪ ಕುಲಸಚಿವ ಎನ್.ಎಸ್.ಚಿದಾನಂದ ಮೂರ್ತಿ ಇತರರಿದ್ದರು.