ಜಿಲ್ಲೆ

ಬಾ.ನಂ.ಲೋಕೇಶಗೆ ಚಿತ್ರಸಂತೆ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ

ಹಾಸನ: ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಶಿಕ್ಷಕ ಬಾ.ನಂ.ಲೋಕೇಶ ಅವರಿಗೆ 2025ನೇ ಸಾಲಿನ ಚಿತ್ರಸಂತೆ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತಿ ಬಾ.ನಂ.ಲೋಕೇಶ ಅವರ ಕೇಸರಿಯೊಳಗೊಂದು ಕಮಲ ಕಾದಂಬರಿ ಎರಡು ವರ್ಷ ಧಾರಾವಾಹಿಯಾಗಿ ಮೂಡಿಬಂದಿತ್ತು. ಇವರ ಆತ್ಮಾವಲೋಕನ ಕಥೆ ಬಾಲಿವುಡ್‌ನ ನಾಯಕನಟಿ ಮಿನಿಷಾ ಲಾಬಾ ನಟಿಸಿರುವ ಹಿಂದಿ ಚಲನಚಿತ್ರ ನಿರ್ಮಲ್ ಪ್ರೇಮ್ ಹೆಸರಿನಿಂದ ಆಗಿರುವುದರೊಂದಿಗೆ ಶ್ರೇಷ್ಠ ಕಥೆಗಾರ ಬಾಲಿವುಡ್ ಪ್ರಶಸ್ತಿ ಗಳಿಸಿದ್ದಾರೆ. ಇವರ ಈ ಎಲ್ಲ ವಿಶಿಷ್ಟ ಸೇವೆಯನ್ನು ಗುರುತಿಸಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ಸ್ಯಾಂಡಲ್‌ವುಡ್ ಚಿತ್ರಸಂತೆ ಕಾರ್ಯಕ್ರಮದಲ್ಲಿ ವರ್ಷದ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಟಿ ಹರ್ಷಿಕಾ ಪೂಣಚ್ಚ, ನಿರ್ದೇಶಕ ಸ್ಮೈಲ್ ಶಿವು, ನಕ್ಷತ್ರ ನಾಡಿ ಜೋತಿಷಿ ದಿನೇಶ್ ಗುರೂಜಿ, ನಿರ್ದೇಶಕ ಸುರೇಶ್‌ಗೌಡ, ಸಂಪತ್ ಇತರರು ಇದ್ದರು.