ಜಿಲ್ಲೆ

ಶಿರೂರು ವೇದವರ್ಧನ ಶ್ರೀಗಳ ಭೇಟಿಯಾದ ವಿಜಯೇಂದ್ರ

ಪರ್ಯಾಯಕ್ಕೆ ಆಹ್ವಾನಿಸಿದ ವೇದವರ್ಧನ ಶ್ರೀ

ಬೆಂಗಳೂರಿನಲ್ಲಿ ಚಾತುರ್ಮಾಸ್ಯ ನಿರತ ಶ್ರೀ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಹಾಗೂ ಭಾವಿ ಪರ್ಯಾಯ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿರುವ ವಿದ್ಯಾಪೀಠದಲ್ಲಿ ತಮ್ಮ 5ನೇ ಚಾತುಮಾರ್ಸ್ಯ ವೃತ ಕೈಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜುಲೈ 25ರಂದು ಭೇಟಿ ನೀಡಿ ಫಲ ಸಮರ್ಪಿಸಿದರು.

ಪರ್ಯಾಯಕ್ಕೆ ಆಹ್ವಾನ

ಈ ವೇಳೆ ಶ್ರೀಗಳು ಮಾತನಾಡಿ, 2026ರ ಜನವರಿ 18ರಂದು ಉಡುಪಿಯಲ್ಲಿ ನಡೆಯಲಿರುವ ಶಿರೂರು ಮಠದ ಪರ್ಯಾಯ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ತಮ್ಮ ಪರ್ಯಾಯದ ಅವಧಿಯಲ್ಲಿ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಶ್ರೀಗಳು, ವೇದ ರಕ್ಷಣೆಗೆ ಪ್ರಮುಖ ಆದ್ಯತೆ ನೀಡುರುವುದಾಗಿ ತಿಳಿಸಿದರು. ವೇದ ಪಂಡಿತರನ್ನು ಪೋಷಿಸುವ ಉದ್ದೇಶದಿಂದ ಶ್ರೀಕೃಷ್ಣ ಮಠದಲ್ಲಿ ನಿರಂತರ 2 ವರ್ಷ ಚತುರ್ವೇದ ಪಾರಾಯಣ ನಡೆಸಲಾಗುವುದು ಎಂದು ತಿಳಿಸಿದರು.

ಮಠದ ಪಾರುಪತ್ತೆಗಾರ ಶ್ರೀಶ ಭಟ್​ ಕಡೆಕಾರು, ಜಯನಗರ ಶಾಸಕ ರಾಮಮೂರ್ತಿ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ಬಸವನಗುಡಿ ಕಾರ್ಪೊರೇಟರ್​ ವೆಂಕಟೇಶ ಉಪಸ್ಥಿತರಿದ್ದರು.