ವಿಜಯಪುರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಬುಧವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬಿ.ಟಿ.ಗೌಡರ (ಅಧ್ಯಕ್ಷ), ಎಂ.ಎಂ.ವಾಲಿಕಾರ (ಉಪಾಧ್ಯಕ್ಷ), ಮಹಾದೇವಿ ಎಸ್.ಸಾಸನೂರ (ಉಪಾಧ್ಯಕ್ಷೆ), ಜೆ.ಎಸ್.ಬೋಳಸೂರ (ಪ್ರಧಾನ ಕಾರ್ಯದರ್ಶಿ), ಭರತೇಶ ಹೊಳಿ (ಖಜಾಂಚಿ), ಸಹಕಾರ್ಯದರ್ಶಿಗಳಾಗಿ ಬಿ.ಎಸ್.ಶೇಖಣ್ಣವರ, ಭಾರತಿ ಸಂಗಪ್ಪ ಉಪಾಸೆ, ಸಂಘಟನಾ ಕಾರ್ಯದರ್ಶಿಯಾಗಿ ರಾಮನಗೌಡ ಮುರಾಳ ಹಾಗೂ ದ್ರೌಪದಿ ಕಬಾಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಚ್.ಎಸ್.ಜ್ಯೋತೆಪ್ಪಗೋಳ ತಿಳಿಸಿದ್ದಾರೆ.