ಜಿಲ್ಲೆ

ನೇಪಥ್ಯಕ್ಕೆ ಸರಿದ ಮಹಾನ್ ನಾಯಕ

ಕಲಬುರಗಿ: ದಲಿತರು, ಶೋಷಿತರು, ಕಾರ್ಮಿಕರ ಏಳಿಗೆಗಾಗಿ ಜೀವನ ಮುಡಿಪಾಗಿಟ್ಟು, ಅವರ ಪ್ರಗತಿಗಾಗಿ ಶ್ರಮಿಸಿದ ಬಿ.ಶಾಮಸುಂದರ ಅವರು ಕೈಗೊಂಡ ಸಾಮಾಜಿಕ ಸುಧಾರಣೆ ಕಾರ್ಯಗಳ ಅಪಾರವಾಗಿದ್ದು, ದೇಶದ ಚರಿತ್ರೆಯಲ್ಲಿ ನೇಪಥ್ಯಕ್ಕೆ ಸರಿದ ಮಹಾನ್ ನಾಯಕ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಯಶವಂತ ಅಷ್ಠಗಿ ಹೇಳಿದರು.

ಕರ್ನಾಟಕ ಸಮತಾ ಸೈನಿಕ ದಳದಿಂದ ನಗರದ ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಭಾರತೀಯ ಭೀಮ ಸೇನಾ ಸಂಸ್ಥಾಪಕ ಬಿ.ಶಾಮಸುಂದರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ, ಕೆಳವರ್ಗದವರ ಸಬಲೀಕರಣಕ್ಕೆ ಸತತ ಹೋರಾಟ ನಡೆಸಿದರು. ಅವರ ಕ್ರಾಂತಿ ಜ್ವಾಲೆಗಳು ದೇದಿಪ್ಯಮಾನವಾಗಿ ರಾಷ್ಟ್ರದೆಲ್ಲೆಡೆ ಬೆಳಗಬೇಕು. ಇಂತಹ ಕಾರ್ಯಕ್ರಮಗಳು ಎಲ್ಲ ಹೋರಾಟಗಾರರಿಗೆ ಸ್ಫೂರ್ತಿ ತುಂಬುತ್ತವೆ ಎಂದರು.

ಸಂಜೀವಕುಮಾರ ಮಾಲೆ ಮಾತನಾಡಿ, ಅಸ್ಪೃಷ್ಯರ ಉದ್ದಾರಕ್ಕೆ ಶಿಕ್ಷಣದಷ್ಟೇ ಭೂ ಒಡೆತನ ಮುಖ್ಯ ಎಂಬುದು ಮನಗಂಡು ಉಳುವವನೇ ಭೂ ಒಡೆಯ ನಿಯಮ ಜಾರಿಗೆ ತರಲು ಬಿ.ಶಾಮಸುಂದರ ಶ್ರಮಿಸಿದ್ದರು. ನಿಜಾಮನ ಪ್ರಾಂತೀಯ ಸರ್ಕಾರದಲ್ಲಿ ಈ ನಿಯಮ ಅನುಷ್ಠಾನಕ್ಕಾಗಿ ಶ್ರಮಿಸಿದರು ಎಂದು ಹೇಳಿದರು.

ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ್ ಮಾತನಾಡಿದರು. ಪೂಜ್ಯ ಭಂತೆ ಧಮ್ಮ ದೀಪ, ಭಂತೆ ಸಂಘಾನಂದ ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಉಪ ಮಹಾಪೌರ ಶಿವಾನಂದ ಪಿಸ್ತಿ ಉದ್ಘಾಟಿಸಿದರು. ಪತ್ರಕರ್ತ ಶಿವರಾಯ ದೊಡ್ಡಮನಿ, ಪ್ರಮುಖರಾದ ಡಾ.ದೇವಿಂದ್ರಪ್ಪ ಕಮಲಾಪುರಕರ, ಸಾಯಬಣ್ಣ ಹೋಳಕರ, ಪೃಥ್ವಿರಾಜ ಬಳ್ಳಾರಿ, ಶಂಕರ ಫಿರಂಗೆ ಬೀದರ್, ಲಕ್ಷö್ಮಣ ಮೂಲಭಾರತಿ, ಎಂ.ಎನ್.ಸುಗಂಧಿ, ಅಪ್ಪಾರಾಯ ಭಾವಿಮನಿ, ಮಹಾದೇವ ನಾಟಿಕರ, ವಿಜಯಕುಮಾರ, ಮಲ್ಲಿಕಾರ್ಜುನ ಉದಯಕರ, ಅಮೃತ ನಾಯ್ಕೋಡಿ, ಶಿವಲಿಂಗಮ್ಮ ಸಾವಳಗಿ, ಯಶೋಧಾ ಕುಸನೂರ ಇತರರಿದ್ದರು.

ಎಂ.ಎನ್.ಸುಗಂಧಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಪ್ಪಾರಾವ ಭಾವಿಮನಿ ನಿರೂಪಣೆ ಮಾಡಿದರು. ಮಹಾದೇವ ನಾಟಿಕರ ವಂದಿಸಿದರು.