ಹಾರೂಗೇರಿ: ಉತ್ತರ ಕರ್ನಾಟಕದ ಸಹಕಾರಿ ವಲಯದಲ್ಲಿ ಹೆಸರು ಮಾಡಿದ ಪ್ರತಿಷ್ಠಿತ ಜನತಾ ಬ್ಯಾಂಕ್ನ ಸಂಸ್ಥಾಪಕ ಅಧ್ಯ ಲಿಂ. ಬಿ.ಆ-ರ್.ಪಾಟೀಲರ 35ನೇ ಪುಣ್ಯಸ್ಮರಣೆ ನಿಮಿ-ತ್ತ ಶುಕ್ರ-ವಾ-ರ ಹಾರೂಗೇರಿ ಹಾಗೂ ಹಿಡಿಕಲ್ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಾಗೂ ಅನಾಥ ಮಕ್ಕಳಿಗೆ ಪ್ರಸಾದ ವಿತರಿಸಲಾಯಿತು.
ಬ್ಯಾಂಕ್ ಸದಸ್ಯ ಡಾ. ಸಿ.ಆರ್.ಗುಡಸಿ ಮಾತ-ನಾ-ಡಿ, ಹಾರೂಗೇರಿ ಆರ್ಥಿಕ ಪ್ರಗತಿಗೆ ಬುನಾದಿ ಹಾಕಿದವರಲ್ಲಿ ಬಿ.ಆರ್.ಪಾಟೀ-ಲ ಮೊದಲಿಗರು. ತಂದೆಯವರ ಕನಸುಗಳನ್ನು ಸಾಕಾರಗೊಳಿಸಲು ಈಗಿನ ಅಧ್ಯ ರಾಜಶೇಖರ ಪಾಟೀಲ-ರ ಶ್ರಮ ಅಭಿನಂದನಾರ್ಹ. ಸಾಮಾಜಿಕ, ಆರ್ಥಿಕ, ಶೈಣಿಕ, ಸಾಂಸತಿಕವಾಗಿ ವಿನೂತನ ಕೊಡುಗೆ ನೀಡುತ್ತಿದ್ದಾರೆ. ಕಷ್ಟ-ದ ಸಮ-ಯ-ದ-ಲ್ಲಿ ಬಡ-ವ-ರಿ-ಗೆ ಆಸರೆ ಆಗುವಂತೆ ಸಕಾಲದಲ್ಲಿ ಸಾಲ ನೀಡುತ್ತಿರುವ ಅವರ ಜನತಾ ಬ್ಯಾಂಕ್ ಹಿರಿಮೆ ಶ್ಲಾನೀಯ ಎಂದರು.
ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಅಮರಶೆಟ್ಟಿ ಮಾತನಾಡಿ, ಹಾರೂ-ಗೇ-ರಿ ಜನ-ತಾ ಸಹ-ಕಾ-ರಿ ಬ್ಯಾಂಕ್ ಉತ್ತರ ಕರ್ನಾಟಕದಲ್ಲಿ ಸಹಕಾರ ರಂಗದ ಅಭಿವೃದಿಟಛಿಗೆ ಪೂರಕವಾಗಿ ಮುನ್ನುಡಿ ಸಾಧಿಸಿದೆ. ಬ್ಯಾಂಕ್ ಆಡಳಿತ ಮಂಡಳಿ ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಸೇವೆಯಿಂದ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿ-ದೆ ಎಂದರು. ಲಿಂ. ಬಿ.ಆರ್.ಪಾಟೀಲರ ಪುತ್ಥಳಿಗೆ ಪುಷ್ಪ ಅರ್ಪಿಸಲಾಯಿತು. ನಿವೃತ್ತ ನೌಕರರಾದ ಮಲ್ಲಪ್ಪ ಕಬ್ಬೂರ ಬ್ಯಾಂಕ್ ಪ್ರಗತಿನೋಟದ ಪತ್ರಿಕಾ ವರದಿಯ ಭಾವಚಿತ್ರವನ್ನು ಸಮರ್ಪಿಸಿದರು. ಸಂಗಣ್ಣ ಸವದತ್ತಿ, ಜಗದೀ-ಶ ಹೆಗಡೆ, ಪಂಚಾರಿ ಹಿರೇಮಠ, ವರ್ಧಮಾನ ಆಸಂಗಿ ಇತರ-ರು ಇದ್ದ-ರು.