ಸರಗೂರು: ತಾಲೂಕಿನ ಬಿ.ಮಟಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಿರೇಹಳ್ಳಿ ದೇವದಾಸ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದೇವದಾಸ್ ಹೊರತುಪಡಿಸಿದರೆ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಉಷಾ ಪ್ರಕಟಿಸಿದರು.
ನೂತನ ಅಧ್ಯಕ್ಷ ದೇವದಾಸ್ ಮಾತನಾಡಿ, ಪಂಚಾಯಿತಿಯು ಕಾಡಂಚಿನ ಗ್ರಾಮಗಳನ್ನು ಹೊಂದಿಕೊಂಡಿದ್ದು, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದಕ್ಕೆ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷೆ ಗೌರಿಬಾಯಿ, ಸದಸ್ಯರಾದ ಅಜಿತ್‌ಕುಮಾರ್, ಎಂ.ನಾಗೇಂದ್ರ, ಕುರ್ಣೇಗಾಲ ಬೆಟ್ಟಸ್ವಾಮಿ, ಬೊಮ್ಮ, ವೀಣಾಕುಮಾರ್, ಎಚ್.ಕೃಷ್ಣ, ನಾಗೇಶ್, ನಾಗರತ್ನಾ, ರೂಪಾ ಬಾಯಿ, ರಾಣಿ ಬಾಯಿ, ಸುನೀತಾ ಬಾಯಿ, ಮೀನಾ ಕುಮಾರಿ, ಚಿನ್ನಮ್ಮ ಮಾದಪ್ಪ, ವಿನೋದ್, ನಾಗಯ್ಯ, ರತ್ನಮ್ಮ, ಎನ್.ಆರ್.ಅಶ್ವಿನಿ, ಸುಮತಿ, ಪಿಡಿಒ ಭಾಗ್ಯಮ್ಮ, ಬಿಲ್‌ಕಲೆಕ್ಟರ್ ಮಹೇಶ್, ಸರಸ್ವತಿ ಹಾಜರಿದ್ದರು.
ಅಧ್ಯಕ್ಷರಾಗಿ ದೇವದಾಸ್ ಅವಿರೋಧವಾಗಿ ಆಯ್ಕೆಯಾದ ಕೂಡಲೇ ಕಚೇರಿ ಆವರಣದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು, ನಾಮಧಾರಿಗೌಡದ ಸಮುದಾಯದ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ರವಿ, ದಾಸಪ್ಪ, ಎಚ್ ಪಿ.ನಾಗೇಂದ್ರ, ರವಿ, ವೈಕುಂಠಯ್ಯ, ವಿಜೇಂದ್ರ, ನಂದಕುಮಾರ್, ಅಭಿಕುಮಾರ್, ಚಿನ್ನಯ್ಯ, ಶ್ರೀನಿವಾಸ, ಮಲ್ಲೇಶ ನಾಯಕ, ನಾಗರಾಜ ನಾಯಕ, ರಾಜ ನಾಯಕ, ಮಂಜು, ಮಲ್ಲರಾಜು, ಹರೀಶ್, ಮಹೇಶ್, ಪ್ರಕಾಶ್, ರತ್ನಯ್ಯ, ನಾಗರಾಜು, ಅಜಿತ್ ಕುಮಾರ್, ವಿಜೇಂದ್ರ, ಶ್ರೀನಿವಾಸ, ನಾಗರಾಜು, ಜಯಶಂಕರ್, ಸುಂದರ್, ಅಭಿಕುಮಾರ್, ಮಹೇಂದ್ರ ಇತರರು ಇದ್ದರು.