ಮದ್ದೂರು: ತಾಲೂಕಿನ ದೊಡ್ಡ ಹೊಸಗಾವಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಮಹೇಶ್, ಉಪಾಧ್ಯಕ್ಷರಾಗಿ ಸಾಕಮ್ಮ ಚುನಾಯಿತರಾದರು.
ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಮಹೇಶ್ ಹಾಗೂ ಬಿ.ಎಸ್.ಗೌಡ ಸ್ಪರ್ಧೆ ಮಾಡಿದ್ದರು. ಬಿ.ಮಹೇಶ್ 8 ಮತಗಳನ್ನು ಪಡೆದು ಜಯಶೀಲರಾದರೆ, ಬಿ.ಎಸ್.ಗೌಡ ಅವರು 5 ಮತಗಳನ್ನು ಪಡೆದು ಸೋತರು. ಉಪಾಧ್ಯಕ್ಷ ಸ್ಥಾನಕ್ಕೆ ಸಾಕಮ್ಮ ಹಾಗೂ ಸರೋಜಮ್ಮ ಅವರು ಸ್ಪರ್ಧೆ ಮಾಡಿದ್ದರು. ಸಾಕಮ್ಮ 7 ಮತಗಳನ್ನು ಪಡೆದು ಜಯಶೀಲರಾದರೆ, ಸರೋಜಮ್ಮ 6 ಮತಗಳನ್ನು ಪಡೆದು ಸೋತರು. ಚುನಾವಣಾಧಿಕಾರಿ ತ್ಯಾಗರಾಜುಪ್ರಕಾಶ್ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ಬಿ.ಮಹೇಶ್ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸಂಘದ ನಿರ್ದೇಶಕರಾದ ಟಿ.ಹುಚ್ಚಪ್ಪ, ಎಂ.ಎನ್.ಪುಟ್ಟರಾಜು, ಮರಿನಾಯಕ, ಎಚ್.ಟಿ.ಪ್ರದೀಪ್‌ಕುಮಾರ್, ಪುಟ್ಟಚನ್ನಯ್ಯ, ಕಾರ್ಯದರ್ಶಿ ಆರ್.ಎಂ.ಕುಮಾರ್, ಮುಖಂಡರಾದ ಕುಮಾರ್‌ಕೊಪ್ಪ, ವಿಜಲಕ್ಷ್ಮೀ ರಘುನಂದನ್, ಮಂಜುನಾಥ್, ದೊರೆಸ್ವಾಮಿ, ಬೋರಲಿಂಗಯ್ಯ, ಕೆ.ರಮೇಶ್, ಸಿದ್ದಲಿಂಗ ಇದ್ದರು.