ಜಿಲ್ಲೆ

ಸರ್ಕಾರ ಬೀಳಿಸುವುದಿರಲಿ ಅಲ್ಲಾಡಿಸಲು ಆಗಲ್ಲ : ಬಿ.ಎಲ್.ಸಂತೋಷಗೆ ಸಚಿವ ಪ್ರಿಯಾಂಕ್ ‌ಖರ್ಗೆ ತಿರುಗೇಟು

ವಿಜಯವಾಣಿ ಸುದ್ದಿಜಾಲ ಕಲಬುರಗಿ

" ಒಂದು‌ ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ತೋರಿಸಿ " ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ . ಸಂತೋಷ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೇರ ಸವಾಲು ಎಸೆದಿದ್ದಾರೆ.

40-45 ಜನ ಸಂಪರ್ಕದಲ್ಲಿದ್ದಾರೆ ಒಪ್ಪಿಗೆ ಸಿಕ್ಕರೆ ಒಂದು ದಿನದ ಕೆಲಸ ಎನ್ನುವ ಸಂತೋಷ್ ಅವರ ಹೇಳಿಕೆಯನ್ನು ಅಟ್ಯಾಚ್ ಮಾಡಿ ಟ್ವಿಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರ ಬೀಳಿಸುವುದು ಇರಲಿ, ಅಲ್ಲಾಡಿಸಲೂ ಸಾಧ್ಯನಾ ಎಂದು ಸವಾಲು ಎಸೆದು ಖಡಕ್ ಟಾಂಗ್ ನೀಡಿದ್ದಾರೆ.

' ಸಂತೋಷ್ ಅವರಿಗೆ ಒಂದು‌ ಸವಾಲು, ಒಂದು ದಿನವಲ್ಲ ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ ಅಲ್ಲಾಡಿಸಿ ತೋರಿಸಲಿ ' ಎಂದು ಭರ್ಜರಿ ಸವಾಲು ಎಸೆದು ಪಂಥಾವ್ಹಾನ ನೀಡಿದ್ದಾರೆ.

ಬಿಜೆಪಿ ವಿರುದ್ಧ ಟೀಕೆ ಮುಂದುವರೆಸಿರುವ ಸಚಿವರು, ' ಇವೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಸವಾಲು, ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಿ, ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ ' ಎಂದು ಕೆಣಕಿದ್ದಾರೆ.

ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದು ನೂರು ದಿನಗಳಾದರೂ ಕೂಡಾ ಬಿಜೆಪಿ ಪ್ರತಿಪಕ್ಷದ ನಾಯಕನ್ನು ಆಯ್ಕೆ ಮಾಡದಿರುವ ಬಗ್ಗೆ ಸಚಿವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ಮಾತಿನಲ್ಲೇ ತಿವಿದಿದ್ದಾರೆ.