ವಿಜಯವಾಣಿ ಸುದ್ದಿಜಾಲ ಉಡುಪಿ
ತುಳುಕೂಟ ಉಡುಪಿ (ರಿ.)ಯ ಹೊಸ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು ಗೌರವಾಧ್ಯಕ್ಷರಾಗಿ ಭಾಸ್ಕರಾನಂದ ಕುಮಾರ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ದಿವಾಕರ ಸನಿಲ್, ಶೋಭಾ ಶೆಟ್ಟಿ, ವಿ.ಕೆ. ಯಾದವ್ ಆಯ್ಕೆಯಾಗಿದ್ದಾರೆ.
ಉಡುಪಿಯಲ್ಲಿ ಸೆ.11ರಂದು ನಡೆದ ತುಳುಕೂಟದ ಸಭೆಯಲ್ಲಿ ಜನಾರ್ದನ ಕೊಡವೂರು ಚುನಾವಣಾ ಅಧಿಕಾರಿಯಾಗಿ ಪಾಲ್ಗೊಂಡು ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ವಿಶ್ವನಾಥ ಶೆಣೈ ಗೌರವ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಕಿದಿಯೂರು, ಸಹ ಕಾರ್ಯದರ್ಶಿಯಾಗಿ ಜ್ಯೋತಿ ದೇವಾಡಿಗ, ಸಂತೋಷಕುಮಾರ್, ಮೋಹನ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿಯಾಗಿ ಚೈತನ್ಯ ಎಂ.ಜಿ., ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ತೋನ್ಸೆ, ಉದಯಕುಮಾರ್ ತೆಂಕನಿಡಿಯೂರ್, ಶಿಲ್ಪಾ ಜೋಷಿ ಆಯ್ಕೆಯಾದರು. ತುಳುಕೂಟದ ವಿವಿಧ ವಿಭಾಗಗಳಿಗೂ ಸಂಚಾಲಕರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು.
ತುಳುಮಿನದನದ ಸಂಚಾಲಕರಾಗಿ ದಯಾನಂದ ಕೆ. ಕಪ್ಪೆಟ್ಟು, ಕೆಮ್ತೂರು, ತುಳು ನಾಟಕ ಪರ್ಬದ ಸಂಚಾಲಕರಾಗಿ ಪ್ರಭಾಕರ ಭಂಡಾರಿ ನಿಟ್ಟೂರು, ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾಗಿ ಜಯರಾಮ ಶೆಟ್ಟಿಗಾರ್ ಮಣಿಪಾಲ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕರಾಗಿ ಪ್ರಕಾಶ ಸುವರ್ಣ ಕಟಪಾಡಿ, ಮದರಂಗಿದ ರಂಗ್ ಲೇಸ್ ಸಂಚಾಲಕರಾಗಿ ಸುಕನ್ಯಾ ಶೇಖರ, ಆಟಿದ ಲೇಸ್ ಸಂಚಾಲಕರಾಗಿ ವಂದನಾ ವಿಶ್ವನಾಥ, ಆಟಿದ ಕಷಾಯದ ಸಂಚಾಲಕರಾಗಿ ವಿವೇಕಾನಂದ ಎನ್., ಸೋನದ ಸೇಸೇ ಲೇಸ್ ಸಂಚಾಲಕರಾಗಿ ಶೇಖರ ಕಲ್ಮಾಡಿ, ತುಳುವೆರೆ ಗೊಬ್ಬುಲುದ ಸಂಚಾಲಕರಾಗಿ ರತ್ನಾಕರ ಇಂದ್ರಾಳಿ, ಜೋಕ್ಲೆಗಾದ್ ತುಳು ಕಥೆ ಸಂಚಾಲಕರಾಗಿ ವಿದ್ಯಾ ಸರಸ್ವತಿ, ತುಳು ಪಠ್ಯದ ಸಂಚಾಲಕರಾಗಿ ವಿಶ್ವನಾಥ ಬಾಯರಿ, ಜೋಕ್ಷೆಗಾದ್ ತುಳುವ ನಡಕೆದ ಸಂಚಾಲಕರಾಗಿ ದಿನೇಶ ಶೆಟ್ಟಿಗಾರ್, ಪ್ರಚಾರ ಮಾಧ್ಯಮದ ಸಂಚಾಲಕರಾಗಿ ಯಶೋದಾ ಕೇಶವ ಆಯ್ಕೆ ಆಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯು.ಜಿ. ದೇವಾಡಿಗ, ರಶ್ಮಿ ಶೆಣೈ, ತಾರಾ ಉಮೇಶ ಆಚಾರ್ಯ, ಭಾರತಿ ಟಿ.ಕೆ., ಗಣೇಶ ಕೋಟ್ಯಾನ್ , ತಾರಾ ಸತೀಶ, ಪೂರ್ಣಿಮಾ, ಪ್ರಭಾವತಿ ವಿಶ್ವನಾಥ, ರೂಪಶ್ರೀ, ಲಕ್ಷ್ಮೀಕಾಂತ್ ಬೆಸ್ತೂರ್, ವೀಣಾ ಶೆಟ್ಟಿ, ಉಷಾ ಸುವರ್ಣ, ರೇವತಿ ಆರ್. ಶೆಟ್ಟಿ, ಸರೋಜಾ ಯಶವಂತ, ಸುಮಾಲಿನಿ ದಯಾನಂದ, ಸುಜಾತಾ ಮೊಯಿಲಿ, ಗೌರವ ಸಲಹೆಗಾರರಾಗಿ ಬನ್ನಂಜೆ ಬಾಬು ಅಮೀನ್, ಮುರಳೀಧರ ಉಪಾಧ್ಯಾಯ ಹಿರಿಯಡ್ಕ, ಡಾ.ಗಣನಾಥ ಎಕ್ಕಾರು, ರವಿ ಶಂಕರ ರೈ, ಎಸ್.ವಿ. ಭಟ್, ಎಸ್.ಎ. ಕೃಷ್ಣಯ್ಯ, ಮನೋರಮಾ ಶೆಟ್ಟಿ, ಶಾಂತರಾಮ ಶೆಟ್ಟಿ, ಹರಿಪ್ರಸಾದ ಶೆಟ್ಟಿ ಆಯ್ಕೆ ಆಗಿದ್ದಾರೆ.