ಜಿಲ್ಲೆ

ಮಾಜಿ ಸಚಿವ ಪಾಟೀಲ್ ಜನ್ಮದಿನಾಚರಣೆ

ಹುಬ್ಬಳ್ಳಿ: ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಜನ್ಮದಿನದ ನಿಮಿತ್ತ ಗದಗ ಜಿಲ್ಲೆ ಮುಂಡರಗಿ ನಗರದ ವತಿಯಿಂದ ಅವರ ಆಪ್ತರು, ಅಭಿಮಾನಿಗಳು ಭೇಟಿ ಮಾಡಿ ಶುಭ ಕೋರಿದರು.

ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ್, ಮುಂಡರಗಿ ಪುರಸಭೆ ಮಾಜಿ ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣ ಹಾಗೂ ಪುರಸಭೆ ಸದಸ್ಯ ಪ್ರಹ್ಲಾದ ಹೊಸಮನಿ, ಪವನ್ ಮೇಟಿ, ಅಂದಪ್ಪ ಬಳ್ಳಾರಿ, ನಾಗರಾಜ್ ಕೊರ್ಲಹಳ್ಳಿ, ಪ್ರಕಾಶ ಹಲವಾಗಲಿ ಇತರರು ಪಾಟೀಲ್ ಅವರನ್ನು ಭೇಟಿ ಮಾಡಿ ಜನ್ಮದಿನ ಆಚರಿಸಿದರು.

ಎಪಿಎಂಸಿ ಮಾಜಿ ಸದಸ್ಯರಾದ ಈಶ್ವರಗೌಡ ಬಸನಗೌಡ ಪಾಟೀಲ್, ರಾಜೇಶಸಾಬ್ ತಪ್ಪಡಿ, ಬಿಜೆಪಿ ಮುಖಂಡರಾದ ಆನಂದಗೌಡ ಪಾಟೀಲ್, ವೀರಣ್ಣ ತುಪ್ಪದ ಹಾಗೂ ಕೌರವ ಸೇನೆಯ ಅಧ್ಯಕ್ಷ ಮಂಜುನಾಥಗೌಡ ಪಾಟೀಲ್, ಶಿವಕುಮಾರ ಡೊಳ್ಳಿನ, ಪ್ರಶಾಂತ ಹಡಪದ ಅವರು ಶುಭ ಹಾರೈಸಿದರು.

ಬಿ.ಸಿ. ಪಾಟೀಲ್ ಅವರು ಆಪ್ತರನ್ನು ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದರು. ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದ ಒಡನಾಟವನ್ನು ಸ್ಮರಿಸಿದರು.