ಬಿ.ಅಪ್ಪಣ್ಣ ಹೆಗ್ಡೆ ಅವರ 90ನೇ ಜನ್ಮ ದಿನಾಚರಣೆಯ ಸಾರ್ವಜನಿಕ ಸಂಭ್ರಮಾಚರಣೆಯ ಅಪ್ಪಣ್ಣ ಹೆಗ್ಡೆ-90 ಕಾರ್ಯಯಕ್ರಮದ ಅಂಗವಾಗಿ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಾಲಯವನ್ನು ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸಿದರು.  
ಜಿಲ್ಲೆ

ಬಿ.ಅಪ್ಪಣ್ಣ ಹೆಗ್ಡೆ ಪ್ರಾಮಾಣಿಕ ನಾಯಕ

ಇಂದಿರಾ ಎನ್ ಕೆ

ಕುಂದಾಪುರ: ಹಿರಿಯರಾದ ಬಿ.ಅಪ್ಪಣ್ಣ ಹೆಗ್ಡೆ ಅವರದು ಜಾತಿ, ಮತ, ಊರನ್ನು ಮೀರಿದ ವ್ಯಕ್ತಿತ್ವ ಹೊಂದಿದ ಪ್ರಾಮಾಣಿಕ ನಾಯಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದರು.

ಬಿ.ಅಪ್ಪಣ್ಣ ಹೆಗ್ಡೆ ಅವರ 90ನೇ ಜನ್ಮ ದಿನಾಚರಣೆಯ ಸಾರ್ವಜನಿಕ ಸಂಭ್ರಮಾಚರಣೆಯ ಅಪ್ಪಣ್ಣ ಹೆಗ್ಡೆ-90 ಕಾರ್ಯಕ್ರಮದ ಅಂಗವಾಗಿ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ವಿಶಾಲ ಮನೋಧರ್ಮ, ತ್ಯಾಗ, ಸಮಾಜದ ಬಗೆಗಿನ ಪರಿಕಲ್ಪನೆ, ಅಗಾಧ ಜ್ಞಾನ ಭಂಡಾರ, ಇಡೀ ಸಮಾಜ ಒಪ್ಪುವ ವ್ಯಕ್ತಿಯಾಗಿದ್ದಾರೆ. ಈಗಿನ ರಾಜಕೀಯವೇ ಒಂದು ರೀತಿಯ ಅಸಡ್ಡೆಯಂತಿದ್ದು, ಕುಂದಾಪುರದ ರಾಜಕೀಯ ಬಹಳ ಹಿಂದಿನಿಂದಲೂ ಇದಕ್ಕೊಂದು ಅಪವಾದ. ಅನೇಕ ಶ್ರೇಷ್ಠ, ಪ್ರಾಮಾಣಿಕ ನಾಯಕರನ್ನು ಇಲ್ಲಿನ ಜನ ಕಂಡಿದ್ದಾರೆ. ಅಂತವರಲ್ಲಿ ಅಪ್ಪಣ್ಣ ಹೆಗ್ಡೆ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಬಿ.ಅಪ್ಪಣ್ಣ ಹೆಗ್ಡೆ ಪುತ್ರರಾದ ರಾಮ್‌ರತನ್ ಹೆಗ್ಡೆ, ರಾಮ್ ಕಿಶನ್ ಹೆಗ್ಡೆ, ಗುರುಕುಲ ವಿದ್ಯಾಸಂಸ್ಥೆ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿಯ ವಸಂತ್ ಗಿಳಿಯಾರು ಸ್ವಾಗತಿಸಿದರು. ಶ್ರೀಕಾಂತ್ ಹೆಮ್ಮಾಡಿ ವಂದಿಸಿದರು. ಗುರುಕುಲ ವಿದ್ಯಾಸಂಸ್ಥೆ ವಿಶಾಲ ಕಾರ್ಯಕ್ರಮ ನಿರೂಪಿಸಿದರು.