ಜಿಲ್ಲೆ

ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ಉತ್ಸವ 28ರಿಂದ

ರಾಯಬಾಗ: ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ 17ನೇ ವರ್ಷದ ಉತ್ಸವವನ್ನು ಅ.28ರಿಂದ 30ರ ವರೆಗೆ ಕಾಲೇಜ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಲ್.ಬಿ.ಚೌಗುಲೆ ತಿಳಿಸಿದರು.

ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.28ರಂದು ಬೆಳಗ್ಗೆ 11 ಗಂಟೆಗೆ ಉತ್ಸವ ಸಮಾರಂಭದ ಉದ್ಘಾಟನೆಯನ್ನು ಗದಗ ಬೃಹನ್ಮಠದ ಶಿವಾನಂದ ಸ್ವಾಮೀಜಿ ನೆರವೇರಿಸುವರು. ಡಾ.ಗಜಾನನ ನಾಯಿಕ ಅತಿಥಿಗಳಾಗಿ ಆಗಮಿಸುವರು. ಸಂಸ್ಥೆ ಅಧ್ಯಕ್ಷ ಎಲ್.ಬಿ.ಚೌಗುಲೆ ಅಧ್ಯಕ್ಷತೆ ಮತ್ತು ನಿರ್ದೇಶಕ ಅಮರ ನಾಗರಾಳೆ ಗೌರವ ಅಧ್ಯಕ್ಷತೆ ವಹಿಸುವರು.

ಅ.29ರಂದು ಬೆಳಗ್ಗೆ 11ಗಂಟೆಗೆ ಜರುಗುವ ಹಿರಿಯರ ಸ್ಮರಣೆ ಹಾಗೂ ಕೀರ್ತನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ನಂದಿಕುರಳಿ ವೀರಭದ್ರ ಸ್ವಾಮೀಜಿ ವಹಿಸುವರು. ಬೆಳಗಾವಿ ರಾಣಿ ಚನ್ನಮ್ಮ ವಿವಿ ಕುಲಸಚಿವ (ಮೌಲ್ಯಮಾಪನ) ಡಾ.ಡಿ.ಎನ್.ಪಾಟೀಲ ಅತಿಥಿಗಳಾಗಿ ಆಗಮಿಸುವರು. ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ ಅಧ್ಯಕ್ಷತೆ ಮತ್ತು ನಿರ್ದೇಶಕಿ ಐಶ್ವರ್ಯ ಚೌಗುಲೆ ಗೌರವ ಅಧ್ಯಕ್ಷತೆ ವಹಿಸಲಿದ್ದಾರೆ. ಪಂಡರಪುರದ ಗೋಪಾಲ ವಾಸ್ಕರ ಮಹಾರಾಜರಿಂದ ಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ಅ.30ರಂದು ಬೆಳಗ್ಗೆ 11ಗಂಟೆಗೆ ಸತೀಶ ಚೌಗುಲೆ ಇವರ 35ನೇ ವರ್ಷದ ಜನ್ಮದಿನ ಹಾಗೂ ಸಮಾರೋಪ ಸಮಾರಂಭ ಸಾನ್ನಿಧ್ಯವನ್ನು ಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಮತ್ತು ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ವಹಿಸಲಿದ್ದಾರೆ. ಅತಿಥಿಗಳಾಗಿ ಆನಂದ ದೇವರು ಆಗಮಿಸಲಿದ್ದಾರೆ. ಸಂಸ್ಥೆ ಉಪಾಧ್ಯಕ್ಷೆ ಭಾರತಿ ಚೌಗುಲೆ ಗೌರವ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯರಾದ ಎಸ್.ಎಸ್. ದಿಗ್ಗೆವಾಡಿ, ಎಸ್.ಎ.ನಾಂದಣಿ, ಇಕ್ಬಾಲ್ ತಾಜಿವಾಲೆ ಇತರರಿದ್ದರು.