ರಬಕವಿ-ಬನಹಟ್ಟಿ: ಪಟ್ಟಣದ ಅಯ್ಯಪ್ಪ ಸೇವಾ ಸಮಿತಿ ಆಶ್ರಯದಲ್ಲಿ ಅಯ್ಯಪ್ಪಸ್ವಾಮಿ ತಿರುವಾಭರಣ ಮೆರವಣಿಗೆ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಲಕ್ಷ್ಮೀ ನಗರದಿಂದ ಅಯ್ಯಪ್ಪ ಸ್ವಾಮಿ ತಿರುವಾಭರಣವಿರುವ ಪೆಟ್ಟಿಗೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಕಾಡಸಿದ್ಧೇಶ್ವರ ದೇವಸ್ಥಾನವರೆಗೆ ಮೆರವಣಿಗೆ ನಡೆಸಲಾಯಿತು. ನೂರಾರು ಹಿರಿಯ ಸ್ವಾಮಿಗಳು, ಅಯ್ಯಪ್ಪ ಸ್ವಾಮಿಯ ಘೋಷಣೆ ಕೂಗುತ್ತ ಭಕ್ತಿಯ ಪರಾಕಾಷ್ಠೆಗೆ ಕಾರಣವಾಯಿತು. ಅಯ್ಯಸ್ವಾಮಿ ಭಾವಚಿತ್ರ ರಥ ಎಳೆದು ಭಕ್ತರು ಹರ್ಷಿಸಿದರು. ಮಾಲಾಧಾರಿಗಳು ತಲೆ ಮೇಲೆ ತಿರವಾಭರಣ ಇರುವ ಪೆಟ್ಟಿಗೆಹೊತ್ತು ಭಕ್ತಿಭಾವದಿಂದ ಪಾಲ್ಗೊಂಡರು.
ಬಸ್ ನಿಲ್ದಾಣ, ತಮ್ಮಣ್ಣಪ್ಪ ರಸ್ತೆ, ಮಂಗಳವಾರ ಪೇಟೆ, ಸೋಮವಾರ ಪೇಟೆ ನಂತರ ಗುಂಡಯ್ಯಸ್ವಾಮಿ ದೇವಸ್ಥಾನದವರೆಗೆ ಅಯ್ಯಪ್ಪ ಮಾಲಾಧಾರಿಗಳು ಮೆರವಣಿಗೆ ಸಮಾರೋಪಗೊಳಿಸಿದರು.
ಪ್ರಶಾಂತ ನಾಯಕ, ಉಮೇಶ ಉಮದಿ, ರಾಚು ಶಿರೋಳ ಸೇರಿ ಹಲವಾರು ಮಾಲಾಧಾರಿಗಳು ಭಾಗವಹಿಸಿದ್ದರು.