ತೇರದಾಳದಲ್ಲಿ ಮಕರಜ್ಯೋತಿ ಅಯ್ಯಪ್ಪಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಅಗ್ನಿಪೂಜೆ ಹಾಗೂ ಮಹಾಪೂಜೆ ನಿಮಿತ್ತ ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು. ಸದಾಶಿವ ರಗಟಿ ಗುರುಸ್ವಾಮಿ ಇತರರಿದ್ದರು. 
ಜಿಲ್ಲೆ

ಸಂಭ್ರಮದ ಅಯ್ಯಪ್ಪಸ್ವಾಮಿ ಪಲ್ಲಕ್ಕಿ ಉತ್ಸವ

ತೇರದಾಳ: ಪಟ್ಟಣದ ಸಿದ್ಧೇಶ್ವರ ದೇವಸ್ಥಾನದಲ್ಲಿ ಮಕರಜ್ಯೋತಿ ಅಯ್ಯಪ್ಪಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಭಾನುವಾರ ಸಂಜೆ ಅಗ್ನಿಪೂಜೆ ಹಾಗೂ ಮಹಾಪೂಜೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು. ಸ್ವಾಮಿ ಮಾಲಾಧಾರಿಗಳು ಭಕ್ತಿಯ ಹಾಡುಗಳಿಗೆ ಹೆಜ್ಜೆ ಹಾಕಿದರು. ಬಳಿಕ ಅಗ್ನಿಪೂಜೆ ನೆರವೇರಿಸಲಾಯಿತು. ಹಲವಾರು ಮಾಲಾಧಾರಿಗಳು ಅಗ್ನಿ ಪ್ರವೇಶಿಸಿ ಭಕ್ತಿಯ ಪರಾಕಷ್ಠೆಗೆ ಸಾಕ್ಷಿಯಾದರು.

ಮುಗಳಖೋಡದ ಸದಾಶಿವ ರಗಟಿ ಗುರುಸ್ವಾಮಿ ನೇತೃತ್ವ ವಹಿಸಿದ್ದರು. ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಗಳಖೋಡ, ಹಂದಿಗುಂದ, ಸುಲ್ತಾನಪುರ, ಇಟ್ನಾಳ, ಸಸಾಲಟ್ಟಿ, ಚಿಮ್ಮಡ, ರಬಕವಿ, ಬನಹಟ್ಟಿ, ಜಗದಾಳ, ಹಿಡಕಲ್, ಹಳ್ಳೂರ, ಪಾಲಭಾವಿ ಸೇರಿ ಬೇರೆ ಬೇರೆ ಊರುಗಳಿಂದ ಅಯ್ಯಪ್ಪಸ್ವಾಮಿ ಭಕ್ತಾದಿಗಳು ಹಾಗೂ ಮಾಲಾಧಾರಿಗಳು ಆಗಮಿಸಿದ್ದರು.