ರಾಯಚೂರಿನ ಬಸವೇಶ್ವರ ವೃತ್ತದ ಬಳಿಯಿರುವ ವಾಲ್ಕಾಟ್ ವೃತ್ತದಲ್ಲಿ ಎನ್.ಎಸ್.ಬೋಸರಾಜು ಫೌಂಡೇಷನ್‌ನಿಂದ ಗುರುವಾರ ಅಯ್ಯಪ್ಪಸ್ವಾಮಿ ಮಹಾಮಂಡಲ ಪಡಿಪೂಜೆ ನೆರವೇರಿಸಲಾಯಿತು. 
ಜಿಲ್ಲೆ

ಅಯ್ಯಪ್ಪಸ್ವಾಮಿ ಮಹಾಪೂಜೆ ಸಂಪನ್ನ

ಮಲ್ಲಮ್ಮನ ಬೆಳವಡಿ: ಗ್ರಾಮದ 30ನೇ ವರ್ಷದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಅಭಿವದ್ಧಿ ಸೇವಾ ಸಂಸ್ಥೆಯಿಂದ ಶನಿವಾರ ಮಹಾಪೂಜೆ ನೆರವೇರಿಸಿತು.

ಬೆಳಗ್ಗೆ ಗ್ರಾವದಲ್ಲಿ ಅಯ್ಯಪ್ಪಸ್ವಾಮಿ ಮೆರವಣಿಗೆಯು ಕುಂಭಮೇಳ ಹಾಗೂ ಸಕಲ ವಾದ್ಯಮೇಳದೊಂದಿಗೆ ನಡೆಯಿತು. ವೇದಮೂರ್ತಿ ಬಸಯ್ಯಸ್ವಾಮಿ ವಿರಕ್ತಮಠ, ರಾಚಯ್ಯ ಸ್ವಾಮಿ ಸಾನ್ನಿಧ್ಯವಹಿಸಿದ್ದರು. ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಮಾತನಾಡಿದರು.

ತಾಪಂ ಮಾಜಿ ಅಧ್ಯಕ್ಷ ಆರ್.ಎಸ್. ರೋಟ್ಟಯ್ಯನವರ ಅಧ್ಯಕ್ಷತೆ ವಹಿಸಿದ್ದರು. ಅನ್ನದಾನಕ್ಕೆ ಸಹಾಯ ಮಾಡಿದವರನ್ನು ಸನ್ಮಾನಿಸಲಾಯಿತು. ವೀರಣ್ಣ ಕರೀಕಟ್ಟಿ, ಗ್ರಾಪಂ ಸದಸ್ಯ ಬಿ.ಜಿ.ದೇಗಾಂವಿ, ಗ್ರಾಪಂ ಉಪಾಧ್ಯಕ್ಷೆ ಸಂಗೀತಾ ಕೀನೇಕರ, ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಈರಯ್ಯ ಕಾರಿಮನಿ, ರಾಚಪ್ಪ ಮಟ್ಟಿ, ರೇಣುಕಾ ಕುರಿ, ಮಡ್ಡೆಪ್ಪ ಪರಮನಾಯ್ಕರ, ಶಂಕರಗೌಡ ಭರಮಗೌಡ್ರ, ನಿಂಗಣ್ಣ ನೇಸರಗಿ, ಜೈನೂಲಸಾಬ್ ಕಿತ್ತೂರ, ಪ್ರವೀಣ ನೆಲ್ಲಿಗಣಿ, ಶಿವು ಭರಮಗೌಡರ ಇತರರಿದ್ದರು.