ಹುನಗುಂದ ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಅಯ್ಯಪ್ಪ ಸ್ವಾಮಿ ಭಾವಚಿತ್ರ ಮೆರವಣಿಗೆ ನಡೆಯಿತು. 
ಜಿಲ್ಲೆ

ಅಯ್ಯಪ್ಪ ಸ್ವಾಮಿ ಭಾವಚಿತ್ರ ಮೆರವಣಿಗೆ

ದತ್ತಾತ್ರೇಯ ಪಿ ಕುಲಕರ್ಣಿ

ಹುನಗುಂದ: ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ 34ನೇ ವರ್ಷದ ಮಹಾಪೂಜೆ, ಕನ್ಯಾಸ್ವಾಮಿಗಳ ಕನ್ಯಾಪೂಜೆ ಹಾಗೂ ಅಯ್ಯಪ್ಪ ಸ್ವಾಮಿ ಭಾವಚಿತ್ರ ಮೆರವಣಿಗೆ ಮಂಗಳವಾರ ನಡೆಯಿತು.

ಇಳಕಲ್ಲದ ಚನ್ನಪ್ಪ ಗುರಸ್ವಾಮಿಗಳು, ಹುನಗುಂದದ ರಾಚಪ್ಪ ಕಾಜಗಾರ ಗುರುಸ್ವಾಮಿಗಳ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಕುಂಭಹೊತ್ತು ಸಾಗುವ ದೃಶ್ಯ ಗಮನ ಸೆಳೆಯಿತು.

ಪಟ್ಟಣದ ನೀಲಗಂಗಾ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಯಿತು. ಸಂಗಮೇಶ್ವರ ದೇವಸ್ಥಾನದಿಂದ ಕುಂಭ ಮೆರವಣಿಗೆ ಆರಂಭಗೊಂಡು ಗಾಂಧಿವೃತ್ತ ಬಜಾರ, ಸಂಗಮೇಶ್ವರ ದೇವಸ್ಥಾನ, ಜಾಮಧಾರ ಶಾಲೆ, ಲಿಂಗದಕಟ್ಟಿ, ಚನ್ನಮ್ಮ ವೃತ್ತ, ವಿಜಯ ಮಹಾಂತೇಶ ವೃತ್ತ್ತ, ಬಸ್ ನಿಲ್ದಾಣ, ಕನಕದಾಸ ವೃತ್ತ್ತ, ಚಿತ್ತವಾಡಗಿ ಕ್ರಾಸ್ ಮೂಲಕ ಅಯ್ಯಪ್ಪ ಸ್ವಾಮಿ ದೇವಸ್ಥಾನ ತಲುಪಿತು.

ಸಂಗಮೇಶ ಭಾದವಾಡಗಿ, ಮಲ್ಲಪ್ಪ ಚೂರಿ, ಬಸವರಾಜ ಹಾದಿಮನಿ, ಸಂಗಮೇಶ ಚೂರಿ, ಮುತ್ತಣ್ಣ ಗುಂಜಾಲಿ, ಕುಮಾರ ಅಳ್ಳೊಳ್ಳಿ, ಮಲ್ಲಪ್ಪ ಹಂಡಿ, ಹನುಮಂತ ಅಮರಾವತಿ, ಪುಲಕೇಶಿ ನೆರಬೆಂಚಿ, ವಿನೋದ ಕುಂಬಾರ ಹಾಗೂ ಅಯ್ಯಪ್ಪ ಮಾಲಾಧಾರಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಅಯ್ಯಪ್ಪ ಸ್ವಾಮಿ ಮಹಾಪೂಜೆ ನೆಡೆಯಿತು.