ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾಮಂದಿರದ ಬೀಗ ಒಡೆದು ಕಳವುಗೈಯಲಾಗಿದ್ದ ಶ್ರೀ ಅಯ್ಯಪ್ಪ ದೇವರ ಬೆಳ್ಳಿಯ ಛಾಯಾಚಿತ್ರ ಹಾಗೂ ಎರಡು ಕಾಣಿಕೆ ಹುಂಡಿಗಳಿಂದ ನಗದು ದೋಚಿದ ಪ್ರಕರಣದ ಫೋಟೋ ಫ್ರೇಮ್ ಲಭಿಸಿದೆ. ಘಟನೆ ನಡೆದು ಎರಡು ದಿನಗಳ ಬಳಿಕ ಬುಧವಾರ ಭಜನಾ ಮಂದಿರದಿಂದ ನೀರ್ಚಾಲು ರಸ್ತೆಯ ಸುಮಾರು 600 ಮೀಟರ್ ದೂರದಲ್ಲಿ ಇವು ಪತ್ತೆಯಾಗಿವೆ. ಕಳವು ನಡೆದ ಮಂದಿರದ ಅನತಿ ದೂರದಲ್ಲೇ ಇವು ಪತ್ತೆಯಾಗಿರುವುದು ಅಚ್ಚರಿಮೂಡಿಸಿದ್ದು, ಬುಧವಾರ ಮುಂಜಾನೆ ಇಲ್ಲಿ ಎಸೆದಿರುವ ಸಾಧ್ಯತೆ ಇದೆ. ಬದಿಯಡ್ಕ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದು, ಫಾರೆನ್ಸಿಕ್ ತಜ್ಞರು ಸಾಕ್ಷೃ ಸಂಗ್ರಹಿಸಿದ್ದಾರೆ.