ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಮಣಿಕಂಠ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿಯ 5ನೇ ವರ್ಷದ ಮಹಾಪೂಜೆ ಕಾರ್ಯಕ್ರಮದಲ್ಲಿ ಮಲಾಧಾರಿಗಳು ಪಾಲ್ಗೊಂಡಿದ್ದರು. 
ಜಿಲ್ಲೆ

ಆಲಬಾಳ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಜಮಖಂಡಿ: ತಾಲೂಕಿನ ಆಲಬಾಳ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿಯ 5ನೇ ವರ್ಷದ ಮಹಾಪೂಜೆ ಸಂಭ್ರಮದಿಂದ ನಡೆಯಿತು.

ಅಯ್ಯಪ್ಪ ಸ್ವಾಮಿಗೆ ವಿವಿಧ ಹೂವಿನಿಂದ ಅಲಂಕರಿಸಿ. ಅಭಿಷೇಕ ಪೂಜೆ ನೆರವೇರಿಸಿದರು. ನೂರಾರು ಮಾಲಾಧಾರಿಗಳು ಅಯ್ಯಪ್ಪನ ಭಕ್ತಿ ಗೀತೆ ಹಾಡುವ ಮೂಲಕ ನಾಮಸ್ಮರಣೆ ಮಾಡಿದರು. ಕುದಿಯುತ್ತಿರುವ ಎಣ್ಣೆಯಲ್ಲಿನ ಭಜಿ ತೆಗೆದು ಭಕ್ತಿ ಭಾವ ಮೆರೆದರು.

ಮಹಾಲಿಂಗ ಗುರುಸ್ವಾಮೀಜಿ ಅಯ್ಯಪ್ಪನ ಮಂತ್ರ ಹೇಳಿದರು.

ಅಭಯ ಗುರುಸ್ವಾಮಿ, ಅಜೇಯ ಗುರುಸ್ವಾಮಿ, ಗೋಪಾಲ ಗುರುಸ್ವಾಮಿ, ಶಿವಲಿಂಗ ಗುರುಸ್ವಾಮಿ, ಸದಾನಂದ ಗುರುಸ್ವಾಮಿ, ರವಿ ಗುರುಸ್ವಾಮಿ, ಹನುಮಂತ ಗುರುಸ್ವಾಮಿ, ಮಾಂತು ಗುರುಸ್ವಾಮಿ, ಬಾಳು ಗುರುಸ್ವಾಮಿ ಸೇರಿ ಜಮಖಂಡಿ, ಮುಧೋಳ ತಾಲೂಕಿನ ಅಯ್ಯಪ್ಪನ ಮಾಲಾಧಾರಿಗಳು ಪೂಜೆಯಲ್ಲಿದ್ದರು.