ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಅಂಗವಾಗಿ ಶ್ರೀ ದೇವಿಯವರಿಗೆ ಮತ್ತು ಅಯ್ಯಪ್ಪಸ್ವಾಮಿ ಮೂರ್ತಿ ಪೂಜೆ ನೆರವೇರಿಸಲಾಯಿತು.
ಮೂರ್ತಿಗೆ ನವವಿಧ ಸ್ನಾನಗಳು, ಮಹಾಪಂಚಾಮೃತ ಅಭಿಷೇಕ, ವೇದೂಷ, ಅಷ್ಟೋತ್ತರ ನಾಮಾವಳಿ ಪಠಣದೊಂದಿಗೆ ದೇವಸ್ಥಾನದ ಸಂಸ್ಥಾಪಕ ಅಧ್ಯೆ ಮಾತೋಶ್ರೀ ಹುಲಿಗೆಮ್ಮಾ ಪೋಸಾ ಅಮ್ಮನವರು ಉದಯಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು.
ಸಂಜೆ ಗೋಧೂಳಿ ಸಮಯದಲ್ಲಿ ಹರಿಹರಪುತ್ರ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆಯು ವಿಜೃಂಭಣೆಯಿಂದ ಜರುಗಿತು.
ಓಂ ಶ್ರೀ ಸ್ವಾಮಿಯೇ ಶರಣಂ ಆಯ್ಯಪ್ಪ ಘೊಷಣೆಗಳೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಅವರು ಶಾಸ್ತ್ರೊಕ್ತವಾಗಿ ಪೂಜಾ ಕೈಂಕರ್ಯ ಜರುಗಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬಾಬುಲಾಲ ಭೋಜಗಾರ, ರಾಜು ಭೋಜಗಾರ, ಅರ್ಜುನ ಭೋಜಗಾರ, ಕಾತಿರ್ಕ ಭೋಜಗಾರ, ಕುಮಾರ ಭೋಜಗಾರ, ಗುರು ಬನ್ನಿಕೊಪ್ಪ, ಗಣೇಶ ಮ್ಯಾಗೇರಿ ಇತರರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಮಂಜುನಾಥ ಇಂಗಳಹಳ್ಳಿ ಸಾಥ್ ನೀಡಿದರು.
ಮಾಜಿ ಸೈನಿಕರಾದ ಸುರೇಶ ನಿಡಗುಂದಿ, ಶಿವಾಜಿ ಗಾಂವಕರ, ಕಾಂಗ್ರೆಸ್ ಮುಖಂಡ ಮಹೇಶ ದಾಬಡೆ, ಹುಬ್ಬಳ್ಳಿ ವಕೀಲರ ಸಂದ ಅಧ್ಯ ಎಂ.ಎಸ್. ಬಾಣದ, ನ್ಯಾಯವಾದಿಗಳಾದ ಅನಿತಾ ಎಂ. ಬಾಣದ, ಹೇಮಂತ ಕರ್ಜಗಿ, ಮಾಜಿ ಪಾಲಿಕೆ ಸದಸ್ಯ ಮಂಜುನಾಥ ಚಿಂತಗಿಂಜಲ, ವಿರುಪಾ ಚಲವಾದಿ, ವಾಗ್ವೇಶಗೌಡ ಪಾಟೀಲ, ಲಕ್ಷ$್ಮಣ ಭೋಜಗಾರ, ಸಿದ್ಧರಾಮ ಸುಳ್ಳದ, ರವೀಂದ್ರ ದಾಗಿನದಾರ, ದಿನೇಶ ನಿಡಗುಂದಿ, ಅರುಣಕುಮಾರ ಹೆಬ್ಬಳ್ಳಿ, ವೆಂಕಟೇಶ ನಿಡಗುಂದಿ, ಭಕ್ತರು ಉಪಸ್ಥಿತರಿದ್ದರು.