Ayyanagudi festival 
ಜಿಲ್ಲೆ

ಅಯ್ಯನಗುಡಿ ಉತ್ಸವ

ನಾಲತವಾಡ: ಇಲ್ಲಿಗೆ ಸಮೀಪದ ಅಯ್ಯನಗುಡಿ ಉತ್ಸವ ಫೆ.5 ರಿಂದ 9ರವರೆಗೆ ಅದ್ದೂರಿಯಾಗಿ ಆಚರಿಸಲಾಗುವುದೆಂದು ಪಪಂ ಮಾಜಿ ಅಧ್ಯ ಹಾಗೂ ಹಾಲಿ ಸದಸ್ಯ ಪೃಥ್ವಿರಾಜ ನಾಡಗೌಡ ತಿಳಿಸಿದ್ದಾರೆ.

ಪಟ್ಟಣದ ಬಸವೇಶ್ವರ ಪ್ರೌಢಶಾಲೆಯಲ್ಲಿ ಗಂಗಾಧರ ಜಾತ್ರೋತ್ಸವ ಸಭೆಯಲ್ಲಿ ವಿವಿಧ ಕಮಿಟಿ ರಚಿಸಿ ಜವಾಬ್ದಾರಿ ಹಂಚಿಕೆ ಮಾಡಿ ಅವರು ಮಾತನಾಡಿದರು.

ಫೆ.5 ರಂದು ಲೊಟಗೇರಿಯ ದೇವಿ ಆರಾಧಕ ಡಾ. ಗುರುಮೂರ್ತಿ ಕಣಕಾಲಮಠ ಅವರಿಂದ ಬೆಳಗ್ಗೆ 9 ಗಂಟೆಗೆ ನವಗ್ರಹ ಹೋಮ, ಫೆ.6 ರಂದು ಪಟ್ಟಣದಲ್ಲಿ ಕಲಶೋತ್ಸವ ನಿಮಿತ್ತ ಕನ್ನಡ ಮತ್ತು ಸಂಸತಿ ಇಲಾಖೆಯಡಿ ಕರಡಿ ಮಜಲು, ನವಿಲು, ಕುದುರೆ, ನಂದಿ, ಡೊಳ್ಳು, ಜೋಗುತಿ ಕುಣಿತ, ವಿವಿಧ ಶಾಲೆ ಮಕ್ಕಳಿಂದ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಲಿದೆ.

ಅಲ್ಲದೆ, ಅಯ್ಯನಗುಡಿಯಲ್ಲಿ ಸಂಜೆ 7.45 ರಿಂದ 9 ಗಂಟೆಯವರೆಗೆ ನಾಡಗೌಡ ಕುಟುಂಬಸ್ಥರಿಂದ ತನಾರ್ಥಿ ನಡೆಯಲಿದೆ. ಸಂಜೆ 7ರಿಂದ ರಾತ್ರಿ 1 ಗಂಟೆಯವರೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

11 ಗಂಟೆಗೆ ದೇವರಗಡ್ಡಿ ಹಾಗೂ ಹಾಲಬಾವಿಯಿಂದ ಗದ್ದೆಮ್ಮ ದ್ಯಾಮವ್ವ ದೇವತೆಗಳ ಆಗಮನ, ಫೆ.7 ರಂದು ಸಂಜೆ 4.30ಕ್ಕೆ ರಥೋತ್ಸವ, ಶ್ರೇಯಾ ನಾಯ್ಕಲ್​, ವೈಷ್ಣವಿ ನಾಯ್ಕಲ್​, ಶ್ರೇಯಾ ತಳವಾರ, ಖುಷಿ ಭೋವಿ ಮಕ್ಕಳ ಭರತನಾಟ್ಯ ನಡೆಯಲಿದೆ. ಬಳಿಕ ಲಿಂ. ಶಂಕರರಾವ್​ ನಾಡಗೌಡ ವೇದಿಕೆ ಉದ್ಘಾಟನೆ ನಡೆಯಲಿದೆ.

ಶಾಸಕ ಸಿ.ಎಸ್​. ನಾಡಗೌಡ ಅಧ್ಯತೆ ವಹಿಸುವರು. ಗ್ರಾಪಂ ಅಧ್ಯೆ ಶರಣಮ್ಮ ಹೊಸಮನಿ ಉದ್ಘಾಟಿಸುವರು. ಅಶೋಕ ಹಂಚಲಿ ಉಪನ್ಯಾಸ ನೀಡುವರು. ದತ್ತಾತ್ರೇಯ ಮಳಖೇಡ, ಕಸಾಪ ಅಧ್ಯ ಹಾಂಶಿಪೀರ್​ ವಾಲಿಕಾರ, ಕಾಮರಾಜ ಬಿರಾದಾರ, ಬಾಳನಗೌಡ ಪಾಟೀಲ, ಡಾ. ಬಲವಂತ ಉಣ್ಣಿಬಾಯಿ, ಲಕ್ಷ$್ಮಣ ರಬ್ಬರ್​ ಆಗಮಿಸುವರು.

ರಾತ್ರಿ 10 ಗಂಟೆಗೆ "ರೊಕ್ಕ ಇದ್ದಾಗ ಸೊಕ್ಕು ಬಾಳ' ನಾಟಕ ಪ್ರದರ್ಶನ ಹಾಗೂ ಡ್ಯಾನ್ಸ್​ ಪ್ರದರ್ಶನ ನಡೆಯಲಿದೆ. ಫೆ.8 ರಂದು ಸಂಜೆ 7 ರಿಂದ 10.30ರ ವರೆಗೆ ಜೋಗುತಿ ನೃತ್ಯ, ನಂತರ "ಸೊಕ್ಕಿನ ಸೊಸೆ' ನಾಟಕ, ಫೆ.9 ರಂದು ದೇವರಗಡ್ಡಿಯ ಗದ್ದೆಮ್ಮ ಹಾಲಬಾವಿಯ ದ್ಯಾಮವ್ವ ದೇವತೆಗಳ ನಿರ್ಗಮನ, ನಂತರ ರಸಮಂಜರಿಯಲ್ಲಿ ಜ್ಯೂ. ವಿಷ್ಣುವರ್ದನ, ಜ್ಯೂ. ಉಪೇಂದ್ರ ಅವರಿಂದ ಕಾರ್ಯಕ್ರಮ, ನಂತರ ಕಾರ್ಯಕ್ರಮದ ಸಮಾರೋಪ ಸಮಾರಂಭ ರಾತ್ರಿ 10 ಗಂಟೆಗೆ "ಹಲೋ ಹೈದ್ರಾಬಾದಿ' ನಾಟಕ ಪ್ರದರ್ಶನ ಹಾಗೂ ಡ್ಯಾನ್ಸ್​ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗಣ್ಣ ಬಾರಡ್ಡಿ, ತ್ರಿ, ರಮೇಶ ಆಲಕೊಪ್ಪರ, ಪಟ್ಟಣದ ಶರಣು ಇಲಕಲ್ಲ, ದುಂಡಪ್ಪಗೌಡ ಜಾವಳಗೇರಿ ಇತರರಿದ್ದರು.