ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ (2023-24) ರಾಜ್ಯದಲ್ಲಿ 94 ಸಾವಿರಕ್ಕೂ ಅಧಿಕ ಮಂದಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ (ಎಬಿ-ಎಆರ್‌ಕೆ) ಯಡಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಅತೀ ಹೆಚ್ಚು 18,336 ರೋಗಿಗಳಿಗೆ ಚಿಕಿತ್ಸೆ ಒದಗಿಸಿದ ಆಸ್ಪತ್ರೆಗಳಲ್ಲಿ ಮೊದಲ ಸ್ಥಾನದಲ್ಲಿದೆ.
ಯೋಜನೆಯಡಿ 2023-24ನೇ ಸಾಲಿನಲ್ಲಿ 16 ಆಸ್ಪತ್ರೆಗಳು ಅತೀ ಹೆಚ್ಚು ರೋಗಿಗಳಿಗೆ ಸೇವೆ ನೀಡಿದ್ದು, ಮೈಸೂರು ಜಿಲ್ಲಾ ಆಸ್ಪತ್ರೆ ಮತ್ತು ಸಂಕ್ರಾಮಿಕ ರೋಗಗಳ ಆಸ್ಪತ್ರೆ 13,284 ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಎರಡನೇ ಸ್ಥಾನದಲ್ಲಿ ಹಾಗೂ ಜಯದೇವ ಹೃದ್ರೋಗ ಸಂಸ್ಥೆ 10,945 ರೋಗಿಗಳಿಗೆ ಸೇವೆ ಕಲ್ಪಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ.
ಉಳಿದಂತೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ (9,562), ಮಿಂಟೋ ಕಣ್ಣಿನ ಆಸ್ಪತ್ರೆ (8,258), ಮೈಸೂರಿನ ಜಯದೇವ ಆಸ್ಪತ್ರೆ (6,130), ಬೆಂಗಳೂರಿನ ಟ್ರಾಮಾ ಸಂಶೋಧನಾ ಕೇಂದ್ರ, ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ (5,654),ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆ್ ನೆ್ರೆೆ ಯುರಾಲಜಿ (5,258), ಮೈಸೂರಿನ ರಾಣಿ ಕೃಷ್ಣಜಮ್ಮಣ್ಣಿ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆ (3,665), ಕಲಬುರಗಿಯ ಜಯದೇವ ಹೃದ್ರೋಗ ಸಂಸ್ಥೆ (3,276), ಬೆಂಗಳೂರಿನ ೋಷಾ ಆಸ್ಪತ್ರೆ (2,779) ಸೇರಿ 16 ಆಸ್ಪತ್ರೆಗಳು ಯೋಜನೆಯಡಿ ಅತೀ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಒದಗಿಸಿದೆ.
ಯೋಜನೆಯ ವಿವರ: ಬಿಪಿಎಲ್ ಪಡಿತರ ಕಾರ್ಡು ಹೊಂದಿರುವ ಲಾನುಭವಿಗಳಿಗೆ ಯೋಜನೆಯಡಿ ಒಂದು ವರ್ಷಕ್ಕೆೆ 5 ಲಕ್ಷ ರೂ. ಗಳವರೆಗೆ ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡುದಾರರು ಆಥವಾ ಬಿಪಿಎಲ್ ಕಾರ್ಡು ಹೊಂದಿಲ್ಲದವರಿಗೆ ಸಹ-ಪಾವತಿ ಆಧಾರದ ಮೇಲೆ ಸರಕಾರಿ ಪ್ಯಾಕೇಜ್ ದರದ ಶೇ.30 ಚಿಕಿತ್ಸಾ ವೆಚ್ಚ ಭರಸಿಲಿದೆ. ಅಂದರೆ ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆೆ 1.50 ಲಕ್ಷ ರೂ. ಇದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಒದಗಿಸಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಆರೋಗ್ಯ ಇಲಾಖೆ ಒತ್ತು ನೀಡುತ್ತಿದ್ದು, ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯ ಪ್ರಮುಖಾಂಶಗಳು:
*ರಾಜ್ಯದಲ್ಲಿರುವ ಒಟ್ಟು 5.09 ಕೋಟಿ ಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವ ಗುರಿ.
*ಯೋಜನೆಯ ಒಟ್ಟು ಅನುದಾನದಲ್ಲಿ ರಾಜ್ಯ ಸರಕಾರ ಶೇ.66 ಹಾಗೂ ಕೇಂದ್ರ ಸರಕಾರ ಶೇ.34 ವೆಚ್ಚ ಭರಿಸಲಿವೆ.
*ಎಪಿಎಲ್ ಕುಟುಂಬದವರಿಗೂ ಯೋಜನೆಯಲ್ಲಿ ಅವಕಾಶ ಕಲ್ಪಿಸಿರುವ ಮೊದಲ ರಾಜ್ಯ ಕರ್ನಾಟಕ. ಎಪಿಎಲ್ ಕುಟುಂಬಗಳಿಗೆ ಶೇ. 30 ಅಂದರೆ 1.5 ಲಕ್ಷ ವೆಚ್ಚ ರಾಜ್ಯ ಸರಕಾರ ಪಾವತಿಸಲಿದೆ.
*1,650 ಪ್ರಕ್ರಿಯೆಗಳಿಗೆ ರಾಜ್ಯದ ಎಲ್ಲಾ ಸಾರ್ವಜನಿಕ ಆಸ್ಪತ್ರೆೆ ಮತ್ತು ರೆರೆಲ್ ಆಧಾರದಲ್ಲಿ 540 ನೊಂದಾಯಿತ ಖಾಸಗಿ ಆಸ್ಪತ್ರೆೆಗಳಲ್ಲಿ ಚಿಕಿತ್ಸೆ ಲಭ್ಯ.
*171 ತುರ್ತು ಚಿಕಿತ್ಸೆೆಯ ಮತ್ತು ಜೀವ ಉಳಿಸುವ ಪ್ಯಾಕೇಜ್ ಒಳಗೊಂಡಿದೆ.