ಬೈಂದೂರು: ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಕರಾಟೆ-ಡೊ ಕೇನ್ರಿಯುಕನ್ ಶೋಟೋಕನ್ ಸ್ಟೈಲ್, ಇಂಡಿಯಾದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಷಿಪ್-2024 ರ ಕಟಾ ವಿಭಾಗದಲ್ಲಿ ಆಯುಷಿ. ಎಸ್. ಶೆಟ್ಟಿ ದ್ವಿತೀಯಮ ಕುಮಿಟೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರು ಹೊಸೂರು ಗ್ರಾಮದ ಸುಂದರ್ ಶೆಟ್ಟಿ ಬೆಳ್ಳಾಲ ಹಾಗೂ ಆಶಾ ಶೆಟ್ಟಿ ನಿಡೂಟಿ ದಂಪತಿ ಪುತ್ರಿ. ಜಡ್ಕಲ್ ಸೆಕ್ರೆಡ್ ಹಾರ್ಟ್ ಅಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ. ಕರಾಟೆ ಶಿಕ್ಷಕ ಶ್ರೀಧರ ವಸ್ರೆ ತರಬೇತಿ ನೀಡಿದ್ದಾರೆ.