ಬಾಳೆಹೊನ್ನೂರಿನ ಸೀಕೆಯ ಶಾಲೋಮ್ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಡಾ. ಎಲ್ಡೋಸ್, ವಿನ್ಸಿ ಲೋಬೋ, ಒ.ಡಿ.ಸ್ಟೀಫನ್, ರವಿ ಸೂರ್ಯ, ಕೃಪಾಲ್ ಗೌಡ ಇತರರಿದ್ದರು. 
ಜಿಲ್ಲೆ

ಆಯುರ್ವೇದ ಪದ್ಧತಿ ಶ್ರೇಷ್ಠ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ರೋಗಿಗಳಿಗೆ ಮರುಜನ್ಮ ನೀಡುವುದೇ ವೈದ್ಯ ವೃತ್ತಿ ವಿಶೇಷ ಎಂದು ಹಿರಿಯ ಕ್ರೀಡಾಪಟು ಒ.ಡಿ.ಸ್ಟೀಫನ್ ಹೇಳಿದರು.

ಸೀಕೆಯ ಶಾಲೋಮ್ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಸೋಮವಾರ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾವೆಲ್ಲ ಪ್ರಪಂಚಕ್ಕೆ ಬರಲು ದೇವರು ಕಾರಣರಾದರೆ, ವೈದ್ಯರು ಚಿಕಿತ್ಸೆ ನೀಡಿ ಜೀವನ ಸುಂದರವಾಗಿರಿಸುತ್ತಿದ್ದಾರೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಆಯುರ್ವೇದ ವೈದ್ಯ ಪದ್ಧತಿಗೆ ವಿಶೇಷ ಮಹತ್ವವಿದೆ. ಯಾವುದೇ ಭಯ, ತೊಂದರೆಗಳಿಲ್ಲದೆ ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ತುರ್ತು ಪರಿಸ್ಥಿತಿಗಳಲ್ಲಿ ಜೀವ ರಕ್ಷಣೆ ನೀಡುವ ವೈದ್ಯರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ವರ್ಷದಲ್ಲಿ ಒಂದು ದಿನ ಮಾತ್ರ ಅವರಿಗೆ ಗೌರವ ಸಲ್ಲಿಸಿದರೆ ಸಾಲದು. ನಿರಂತರವಾಗಿ ಮನದಲ್ಲಿ ಸ್ಮರಿಸಬೇಕು ಎಂದರು.
ಶಾಲೋಮ್ ಆಯುರ್ವೇದಿಕ್ ಕೇಂದ್ರದ ಮುಖ್ಯಸ್ಥ ವಿನ್ಸಿ ದುಮ್ಮಿಂಗ್ ಲೋಬೋ, ಆಯುರ್ವೇದ ವೈದ್ಯ ಎಲ್ಡೋಸ್, ಕಾಫಿ ಬೆಳೆಗಾರ ಕೃಪಾಲ್ ಗೌಡ, ರವಿ ಸೂರ್ಯ ಇದ್ದರು.