ಮೈಸೂರು:ಹೊಸ ಸಮಸ್ಯೆಗಳು ಉದ್ಭವಿಸುತ್ತಿರುವ ಇಂದಿನ ದಿನಗಳಲ್ಲಿ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದ ಚಿಕಿತ್ಸೆ ಅನಿವಾರ್ಯ ಹಾಗೂ ಅಗತ್ಯ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಂು ಕುಲಪತಿ ಡಾ.ಎಂ.ಕೆ.ರಮೇಶ್ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಆಂುುರ್ವೇದ ವೈದ್ಯಕೀಂು ಮಹಾವಿದ್ಯಾನಿಲಂುದಿಂದ ಜೆಎಸ್‌ಎಸ್ ಆಸ್ಪತ್ರೆಂು ರಾಜೇಂದ್ರ ಶತವಾನೋತ್ಸವ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2024ನೇ ಸಾಲಿನ ಪದವಿ ಪ್ರದಾನ ಸವಾರಂಭ ಉದ್ಘಾಟಿಸಿ, ಅತ್ಯುತ್ತಮ ಅಂಕಗಳಿಸಿದ ಪದವಿಧರರಿಗೆ ಸುವರ್ಣ ಪದಕ ಹಾಗೂ ಪ್ರಶಸ್ತಿ ಪತ್ರ ಪ್ರದಾನ ವಾಡಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಪರಿಸರದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಆಧುನಿಕ ಜೀವನಶೈಲಿಯ ಕಾರಣದಿಂದ ಮನುಷ್ಯ ಹೊಸ, ಹೊಸ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಇಂತಹ ಸಂಕಷ್ಟದಿಂದ ಹೊರಬರಲು ಆಯುರ್ವೇದ ಚಿಕಿತ್ಸೆ ಅನಿವಾರ್ಯ, ಅಗತ್ಯವೂ ಹೌದು ಎಂದು ಹೇಳಿದರು.
ಆಯುರ್ವೇದ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡರೆ ಪಾಶ್ಚಾತ್ಯ ಚಿಕಿತ್ಸಾ ವಿಧಾನಕ್ಕಿಂತಲೂ ಅತ್ಯಂತ ಸಮರ್ಥವಾಗಿ ಆಯುರ್ವೇದ ಚಿಕಿತ್ಸೆ ಬೆಳೆಸಬಹುದು ಎಂದರು.
ಪ್ರಸ್ತುತ ಆಯುರ್ವೇದ ವೈದ್ಯಕೀಂು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನಶೀಲತೆ, ಕುತೂಹಲಕಾರಿ ಮನಸ್ಥಿತಿ, ಸಂವಹನ ಕಲೆ ಮತ್ತು ಮಾನವೀಯ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ತಂದೆ, ತಾಯಿಯರು ತಮ್ಮ ಎಲ್ಲ ಆಸೆ-ಕನಸು ತ್ಯಾಗ ಮಾಡಿರುತ್ತಾರೆ. ಆದ್ದರಿಂದ ಮಕ್ಕಳು ಅವರಿಗೆ ಸದಾಕಾಲ ಕೃತಜ್ಞರಾಗಿರಬೇಕು. ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು. ಗುರುಹಿರಿಯರ ಬಗ್ಗೆ ಗೌರವ ಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಂುುವಕರೇ ಇದ್ದಾರೆ. ಯುವಕರು ವಿವಿಧ ಕ್ಷೇತ್ರಗಳಲ್ಲಿ ನೈಪುಣ್ಯತೆಯನ್ನು ಬೆಳೆಸಿಕೊಂಡು ಮುಂದೆ ಬಂದರೆ ದೇಶವನ್ನು ಎಲ್ಲ್ಲ ಕ್ಷೇತ್ರದಲ್ಲಿಯೂ ಬಲಿಷ್ಠವಾಗುವ ರೀತಿಯಲ್ಲಿ ನಿರ್ಮಿಸಬಹುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ 103 ಸ್ನಾತಕ ಮತ್ತು 23 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಂರ್ುನಿರ್ವಾಹಕ ಕಾಂರ್ುದರ್ಶಿ ಡಾ.ಸಿ.ಜಿ.ಬೆಟ್‌ಸೂರ ಮಠ, ಜೆಎಸ್‌ಎಸ್ ವೈದ್ಯಕೀಂು ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಪ್ರಾಂಶುಪಾಲ ಡಾ.ಸರ್ಬೇಶ್ವರ್ ಕರ್ ಇತರರು ಇದ್ದರು.