ಮಾನ್ವಿಯ ಕೆಪಿಎಸ್‌ವಿಎಸ್ ಆಯುರ್ವೇದಿಕ್ ಮೇಡಿಕಲ್ ಕಾಲೇಜಿನಲ್ಲಿ ಆಯುರ್ವೇದ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಚಾರ್ಯ ಡಾ.ಜೀವನೇಶ್ವರಯ್ಯ, ಉಪಪ್ರಾಚಾರ್ಯೆ ಡಾ.ಎಚ್.ಎಂ.ಸುಮಂಗಲಾ, ಉಪನ್ಯಾಸಕರಾದ ಡಾ.ನಾರಾಯಣ, ಡಾ.ವಿಶ್ವೇಶ್ವರಮಠ, ಡಾ.ಸುನೀತಾ ಇತರರಿದ್ದರು. 
ಜಿಲ್ಲೆ

ಆಯುರ್ವೇದದಿಂದ ಸಕಲ ರೋಗಗಳ ನಿವಾರಣೆ

ಗಾಯತ್ರಿ ಮಾಲಿಪಾಟೀಲ್

ಮಾನ್ವಿ: ಆಧುನಿಕ ಯುಗದಲ್ಲಿ ಉತ್ತಮ ಆರೋಗ್ಯಕ್ಕಾಗಿ ವಿಶ್ವವೇ ಭಾರತದ ಪ್ರಾಚೀನ ಆಯುರ್ವೇದ ವೈದ್ಯ ಪದ್ಧತಿ ಕಡೆ ವಾಲಿದೆ. ಆಯುರ್ವೇದ ವೈದ್ಯಪದ್ಧತಿಯಿಂದ ಸಕಲ ರೋಗಗಳ ನಿವಾರಣೆಯಾಗುತ್ತವೆ ಎಂದು ಆಯುರ್ವೇದಿಕ್ ಮೇಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಜೀವನೇಶ್ವರಯ್ಯ ಹೇಳಿದರು.

ಪಟ್ಟಣದ ಕೆಪಿಎಸ್‌ವಿಎಸ್ ಆಯುರ್ವೇದಿಕ್ ಮೇಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 10ನೇ ವರ್ಷದ ಆಯುರ್ವೇದ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಒತ್ತಡ ರಹಿತ ಜೀವನ ನಡೆಸಲು ಆಯುರ್ವೇದ ಮುಖ್ಯ. ವೈದ್ಯ ಪದ್ಧತಿ ಉತ್ತಮ ದಿನಚರ್ಯ, ಋತುಚರ್ಯ, ಸದೃತ್ತಗಳನ್ನು ಆಚರಿಸಿದರೆ ಉತ್ತಮ ಅರೋಗ್ಯ ಹೊಂದಲು ಸಾಧ್ಯ ಎಂದರು. ಉಪಪ್ರಾಚಾರ್ಯೆ ಡಾ.ಎಚ್.ಎಂ.ಸುಮಂಗಲಾ ಪ್ರತಿಜ್ಞಾ ವಿಧಿ ಬೋಧಿಸಿದರು.

ಉಪನ್ಯಾಸಕರಾದ ಡಾ.ನಾರಾಯಣ, ಡಾ.ಶಿವರಾಜ ಹಿರೇಮಠ, ಡಾ.ವಿಶ್ವೇಶ್ವರಮಠ, ಡಾ.ಸುನೀತಾ ಇತರರದ್ದರು.