ಜಿಲ್ಲೆ

ಹುಬ್ಬಳ್ಳಿಯಲ್ಲಿ ಆಯುರ್ವೇದ ಶಿಬಿರ 16ರಂದು

Dharwada - Basavaraj Idli

ಹುಬ್ಬಳ್ಳಿ: ಬೊಜ್ಜು ನಿವಾರಣೆ, ಪಿಸಿಒಡಿ, ಮಧುಮೇಹ ಮುಂತಾದ ರೋಗಗಳ ಬಗ್ಗೆ ಉಚಿತ ಆಯುರ್ವೇದ ತಪಾಸಣೆ ಶಿಬಿರವನ್ನು ನ. 16ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಶಿರೂರ ಪಾರ್ಕ್ ಅಕ್ಷಯ ಕಾಲನಿಯಲ್ಲಿರುವ ಎಸ್ ಬಿಐ ಬಳಿಯ ಪ್ರಾಣವೈದ್ಯ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ.

ಸಂಧಿವಾತ, ಸ್ನಾಯುನೋವು, ಆರ್ಥರಿಟಿಸ್ ಇತರ ಸಮಸ್ಯೆಗಳಿಗೂ ಆಯುರ್ವೇದ ತಜ್ಞರು ಉಚಿತ ಚಿಕಿತ್ಸೆ, ಸಲಹೆ ನೀಡುವರು ಎಂದು ಪ್ರಕಟಣೆ ತಿಳಿಸಿದೆ.