ಜಿಲ್ಲೆ

ಕುಕ್ಕೆ ದೇವಳದಲ್ಲಿ ಆಯುಧಪೂಜೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಿಯ ಪೂಜೆ ಶ್ರದ್ಧಾ ಭಕ್ತಿಯಿಂದ 9 ದಿನ ನೆರವೇರಿತು. ಮೂರು ದಿನ ಶಾರದಾ ಪೂಜೆ ನಡೆಯಿತು. ಈ ಮೂಲಕ ದೇವಳದಲ್ಲಿ ಸಂಪ್ರದಾಯ ಪ್ರಕಾರ ನವರಾತ್ರಿ ಉತ್ಸವ ನೆರವೇರಿತು.

ಕೊನೆಯ ಪೂಜೆಯ ದಿನ ದೇವಳದಲ್ಲಿನ ಆಯುಧಗಳಿಗೆ ಒಳಾಂಗಣದಲ್ಲಿ ಆಯುಧಪೂಜೆ ನೆರವೇರಿತು. ದೇವಳದ ಮರದ ಕೆಲಸ ನಿರ್ವಹಿಸುವ ಕೊಟ್ಟಿಗೆ, ದೇವಳದ ವಾಹನಗಳಿಗೆ ಮತ್ತು ವಿದ್ಯುತ್ ಉಪಕರಣಗಳಿಗೆ ಪೂಜೆ ನೆರವೇರಿತು. ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸೇರಿದಂತೆ ದೇವಳದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.