ಜಿಲ್ಲೆ

ಉಡುಪಿ ಕೃಷ್ಣ ಮಠಕ್ಕೆ ಅಯೋಧ್ಯೆ ಮಂತ್ರಾಕ್ಷತೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ವಿಶ್ವಹಿಂದೂ ಪರಿಷತ್​ ವತಿಯಿಂದ ಅಯೋಧ್ಯೆಯಿಂದ ಪವಿತ್ರ ಮಂತ್ರಾಕ್ಷತೆಯನ್ನು ಪ್ರತಿ ಗ್ರಾಮದ ಮನೆ ಮನೆಗೆ ತಲುಪಿಸಲು ಉದ್ದೇಶಿಸಲಾಗಿದ್ದು, ಭಾನುವಾರ ಅಕ್ಷತೆ ತುಂಬಿದ ಕಲಶವನ್ನು ಮೆರವಣಿಗೆ ಮೂಲಕ ಶ್ರೀ ಕೃಷ್ಣಮಠದ ಮುಂಭಾಗದಲ್ಲಿ ಸ್ವಾಗತಿಸಲಾಯಿತು.

ಪರ್ಯಾಯ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೃಷ್ಣದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು.

ಆರ್​ ಎಸ್​ ಎಸ್​ ಹಿರಿಯ ಪ್ರಚಾರಕ ಶಂಭು ಶೆಟ್ಟಿ, ಪ್ರಾಂತ ಅರ್ಚಕ ಪುರೋಹಿತ ಪ್ರಮುಖ್​ ಪ್ರೇಮಾನಂದ ಶೆಟ್ಟಿ , ಭಜರಂಗ ದಳ ರಾಜ್ಯ ಸಂಚಾಲಕ ಸುನಿಲ್​ ಕೆ ಆರ್​., ವಿಭಾಗ ಕಾರ್ಯಕಾರಿಣಿ ಸದಸ್ಯ ಕುಯಿಲಾಡಿ ಸುರೇಶ ನಾಯಕ್​, ಭಜರಂಗ ದಳ ಜಿಲ್ಲಾ ಸಂಚಾಲಕ ಚೇತನ್​ ಪೆರಾಲ್ಕೆ , ಜಿಲ್ಲಾ ಸೇವಾ ಪ್ರಮುಖ್​ ವಿಖ್ಯಾತ್​ ಭಟ್​, ಪ್ರಾಣ ಪ್ರತಿಷ್ಠಾ ಅಭಿಯಾನದ ಜಿಲ್ಲಾ ಸಂಯೋಜಕ ಸುರೇಂದ್ರ ಮಾರ್ಕೊಡ್​, ವಿಶ್ವ ಹಿಂದೂ ಪರಿಷತ್​ ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ವಿಶ್ವ ಹಿಂದೂ ಪರಿಷತ್​ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಸುಪ್ರಸಾದ್​ ಶೆಟ್ಟಿ, ವರದರಾಜ್​ ಭಟ್​, ವಿಷ್ಣ್ಣು ಪ್ರಸಾದ್​ ಪಾಡಿಗಾರ್​ ಉಪಸ್ಥಿತರಿದ್ದರು.